ಬೆಂಗಳೂರು: ರಾಜ್ಯ ಸರ್ಕಾರ ಹೆಚ್ಚುವರಿ ಬರಪೀಡಿತ ತಾಲೂಕುಗಳನ್ನು ಘೋಷಣೆ ಮಾಡಿದೆ. 21 ಬರಪೀಡಿತ, 22 ಸಾಧಾರಣ ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ.
ಚಾಮರಾಜನಗರ, ಕೆಆರ್ ನಗರ, ಖಾನಾಪುರ, ಬೆಳಗಾವಿ, ಯಳಂದೂರು, ಮುಂಡರಗಿ, ಬ್ಯಾಡಗಿ, ಹಾನಗಲ್, ಶಿಗ್ಗಾಂವಿ, ಕಲಘಟಗಿ, ಅಳ್ನಾವರ, ಅಣ್ಣಿಗೇರಿ, ಆಲೂರು, ಅರಸೀಕೆರೆ, ಹಾಸನ, ಮೂಡಿಗೆರೆ, ತರೀಕೆರೆ, ಪೊನ್ನಂಪೇಟೆ, ಹೆಬ್ರಿ, ಸಿದ್ದಾಪುರ, ದಾಂಡೇಲಿ ಬರ ಪೀಡಿತ ತಾಲೂಕುಗಳು ಎಂದು ಸರ್ಕಾರ ಘೋಷಣೆ ಮಾಡಿದೆ.
ಬೆಂಗಳೂರು ಉತ್ತರ, ಚನ್ನಪಟ್ಟಣ, ಮಾಗಡಿ, ಮಾಲೂರು, ತುಮಕೂರು, ಗುಂಡ್ಲುಪೇಟೆ, ಹನೂರು, ಕೊಳ್ಳೇಗಾಲ, ದೇವದುರ್ಗ, ಮಸ್ಕಿ, ಬೇಲೂರು, ಹೊಳೆನರಸೀಪುರ, ಸಕಲೇಶಪುರ, ಶೃಂಗೇರಿ, ಚನ್ನರಾಯಪಟ್ಟಣ, ಸೋಮವಾರಪೇಟೆ, ಕೊಪ್ಪಳ, ಎನ್ಆರ್ ಪುರ, ಮಂಗಳೂರು, ಮೂಡಬಿದರೆ, ಬ್ರಹ್ಮಾವರ, ಕಾರಾವರ ಸಾಧಾರಣ ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಲಾಗಿದೆ. ಕಂದಾಯ ಇಲಾಖೆ ವಿಪತ್ತು ನಿರ್ವಹಣೆ ಜಂಟಿ ಕಾರ್ಯದರ್ಶಿ ಟಿ.ಸಿ. ಕಾಂತರಾಜು ಆದೇಶ ಹೊರಡಿಸಿದ್ದಾರೆ.