
ಭಾರತದಲ್ಲೇ ನಿರ್ಮಿತವಾದ ರಷ್ಯಾ ಮೂಲದ ಸ್ಪುಟ್ನಿಕ್-5 ಕೋವಿಡ್ ಲಸಿಕೆಯು ಸೆಪ್ಟೆಂಬರ್ ಅಂತ್ಯದಿಂದ ಲಭ್ಯವಾಗಲಿದೆ ಎಂದು ಡಾ. ರೆಡ್ಡಿಸ್ ಪ್ರಯೋಗಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೈದರಾಬಾದ್‌ನಲ್ಲಿರುವ ರೆಡ್ಡಿಸ್ ಲ್ಯಾಬ್‌ನ ಬ್ರಾಂಡೆಡ್ ಮಾರುಕಟ್ಟೆ ವಿಭಾಗದ ಸಿಇಓ ಎಂ.ವಿ. ರಮಣ ಮಾತನಾಡಿ, ಸ್ಪುಟ್ನಿಕ್ ಲಸಿಕೆಗಳ ಆಗಮನವು ನಿಧಾನವಾಗುತ್ತಿದ್ದು ಆಗಸ್ಟ್ ಅಂತ್ಯಕ್ಕೆ ಪರಿಸ್ಥಿತಿ ಸುಧಾರಿಸಲಿದೆ ಎಂದಿದ್ದಾರೆ.
ಆಗಸ್ಟ್ ನಲ್ಲಿ ಬ್ಯಾಂಕುಗಳಿಗಿದೆ ಇಷ್ಟು ದಿನ ರಜಾ
ಸ್ಪುಟ್ನಿಕ್-5 ಲಸಿಕೆಗೆ ಭಾರತದಲ್ಲಿ ರಷ್ಯಾದ ನೇರವ ಬಂಡವಾಳ ಹೂಡಿಕೆಯೊಂದಿಗೆ (ಆರ್‌ಡಿಐಎಫ್) ಕೈಜೋಡಿಸಿರುವ ಡಾ. ರೆಡ್ಡಿಸ್ ಮೇ 2021ರಿಂದ ಲಸಿಕೆಯನ್ನು ಭಾರತದಲ್ಲಿ ಪರಿಚಯಿಸಿದೆ. ಸ್ಪುಟ್ನಿಕ್-5 ಲಸಿಕೆಯನ್ನು ದೇಶದಲ್ಲಿ ಉತ್ಪಾದನೆ ಮಾಡಲು ಆರು ಉತ್ಪಾದಕರೊಂದಿಗೆ ಆರ್‌ಡಿಐಎಫ್ ಕೈಜೋಡಿಸಿದೆ. ದೇಶದಲ್ಲಿ 12.5 ಕೋಟಿ ಮಂದಿಗೆ ಸ್ಪುಟ್ನಿಕ್-5 ಕೋವಿಡ್-19 ಲಸಿಕೆಗಳನ್ನು ಮಾರಾಟ ಮಾಡಲು ಡಾ. ರೆಡ್ಡಿಸ್ ರಷ್ಯಾದ ಕಂಪನಿಯೊಂದಿಗೆ ಕೈಜೋಡಿಸಿದೆ.