ದೇಶ ಕಂಡ ಅತ್ಯದ್ಭುತ ನಟ ಡಾ. ರಾಜ್ ಕುಮಾರ್ ಕುಟುಂಬದ ಮತ್ತೊಂದು ಕುಡಿ `ಗಂಧದ ಗುಡಿ’ಗೆ ಪಾದಾರ್ಪಣೆ ಮಾಡುತ್ತಿದೆ.
ರಾಜ್ ಕುಮಾರ್ ಅವರ ಮೊಮ್ಮಗ, ರಾಘವೇಂದ್ರ ರಾಜ್ ಕುಮಾರ್ ಅವರ ಪುತ್ರ ಯುವ ರಾಜಕುಮಾರ್ ಬ್ಲಾಕ್ ಬಸ್ಟರ್ ಕೆಜಿಎಫ್ ಚಿತ್ರದ ನಿರ್ಮಾಣ ಸಂಸ್ಥೆಯಾಗಿರುವ ಹೊಂಬಾಳೆ ಫಿಲ್ಮ್ ನಿರ್ಮಾಣದಲ್ಲಿನ ಹೊಸ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಪ್ರವೇಶಿಸಲಿದ್ದಾರೆ.
ರಾಜಕುಮಾರ ಮತ್ತು ಮಿಸ್ಟರ್ & ಮಿಸೆಸ್ ರಾಮಾಚಾರಿಯಂತಹ ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿರುವ ಸಂತೋಷ್ ಆನಂದರಾಮ್ ಅವರು ಯುವ ರಾಜಕುಮಾರ್ ಚಿತ್ರವನ್ನು ನಿರ್ದೇಶಿಸಲಿದ್ದಾರೆ.
545 PSI ನೇಮಕಾತಿ ಅಕ್ರಮ: ಕಿಂಗ್ ಪಿನ್ ಗಳೊಂದಿಗೆ ಸಂಪರ್ಕದಲ್ಲಿದ್ದವರಿಗೆ ಬಿಗ್ ಶಾಕ್
ಬುಧವಾರ ಹೊಂಬಾಳೆ ಫಿಲ್ಮ್ಸ್ ಯುವ ರಾಜಕುಮಾರ್ ಅವರ ಹೊಸ ಚಿತ್ರದ ಬಗ್ಗೆ ಘೋಷಣೆ ಮಾಡಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಂಸ್ಥೆಯು, “ಹೊಂಬಾಳೆ ಸಂಸ್ಥೆಗೂ ಡಾ. ರಾಜಕುಮಾರ್ ಕುಟುಂಬದ ನಡುವಿನ ಸಂಬಂಧದ ಮುಂದುವರಿದ ಭಾಗವಾಗಿ ನಾವು ಕುಟುಂಬದ ಮೂರನೇ ತಲೆಮಾರಿನ ಯುವ ರಾಜಕುಮಾರ್ ಅವರನ್ನು ನಾಯಕ ನಟನನ್ನಾಗಿ ಬೆಳ್ಳಿ ಪರದೆಗೆ ಪರಿಚಯ ಮಾಡುತ್ತಿರುವುದಕ್ಕೆ ಹೆಮ್ಮೆ ಪಡುತ್ತಿದ್ದೇವೆ’’ ಎಂದು ಹೇಳಿದೆ.
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಪತ್ನಿ ಅಶ್ವಿನಿ ಅವರು ಟ್ವೀಟ್ ಮಾಡಿದ್ದು, “ನಿಮ್ಮ ಸಮೃದ್ಧವಾದ ಅರ್ಹವಾದ ಎಲ್ಲಾ ಯಶಸ್ಸನ್ನು ಬಯಸುತ್ತೇನೆ. ಈ ಪರಂಪರೆ ಮುಂದುವರಿಯುತ್ತದೆ’’ ಎಂದು ಶುಭ ಕೋರಿದ್ದಾರೆ.