ನವದೆಹಲಿ: ಎರಡು ದಿನಗಳ ಹಿಂದೆ ತೀವ್ರ ಅನಾರೋಗ್ಯದಿಂದ ನಿಧನರಾಗಿರುವ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಅಸ್ಥಿಯನ್ನು ಆಗ್ರಾದ ಯಮುನಾ ನದಿಯಲ್ಲಿ ಕುಟುಂಬ ಸದಸ್ಯರು ವಿಸರ್ಜನೆ ಮಾಡಿದ್ದಾರೆ.
ಮೊದಲು ಗುರುದ್ವಾರದ ಮಜ್ನುಕಾ ಟಿಲ್ಲಾಗೆ ಮನಮೋಹನ್ ಸಿಂಗ್ ಅವರ ಅಸ್ಥಿ ತರಲಾಗಿದ್ದು, ಅಲ್ಲಿ ಸಿಖ್ ಸಂಪ್ರದಾಯದಂತೆ ಶಬ್ಧ ಕೀರ್ತನಾ, ಅನಂತರ ಪಾಠದ ಬಳಿಕ ಯಮುನಾ ನದಿಯಲ್ಲಿ ಅಸ್ಥಿ ವಿಸರ್ಜಿಸಲಾಯಿತು.
ಈ ವೇಳೆ ಡಾ.ಮನಮಹನ್ ಸಿಂಗ್ ಪತ್ನಿ ಹಾಗೂ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.