ದೇಶದಲ್ಲಿ ಕೊರೊನಾ ಲಸಿಕೆಯ 100 ಕೋಟಿ ಡೋಸ್ ಲಸಿಕೆ ಹಂಚಿಕೆ ಕುರಿತಂತೆ ಐಟಿ, ಬಿಟಿ ಸಚಿವ ಡಾ. ಸಿ. ಅಶ್ವತ್ಥ ನಾರಾಯಣ ಸಂತಸ ವ್ಯಕ್ತಪಡಿಸಿದ್ರು. ಬೆಂಗಳೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ಮುಂದುವರಿದ ದೇಶಗಳಲ್ಲಿ ಶೇಕಡಾ 20ರಷ್ಟು ಲಸಿಕೆ ನೀಡಿಲ್ಲ. ಅಂತದ್ರಲ್ಲಿ ನಮ್ಮ ದೇಶ ಮಾಡಿದ ಸಾಧನೆ ನಿಜಕ್ಕೂ ಗಮನಾರ್ಹ ಎಂದು ಹೇಳಿದ್ರು.
ಹುಟ್ಟುಹಬ್ಬದ ಸಂಭ್ರಮದಲ್ಲಿ ನಿರ್ದೇಶಕ ಪ್ರೇಮ್
ಕೊರೊನಾ ಮೂರನೇ ಡೋಸ್ ಲಸಿಕೆ ಕುರಿತಂತೆ ತಜ್ಞರು ಯಾವುದೇ ಶಿಫಾರಸ್ಸನ್ನು ಮಾಡಿಲ್ಲ. ಅಲ್ಲದೇ ದೇಹದಲ್ಲಿ ನ್ಯೂಟ್ರಲೈಸ್ ಆ್ಯಂಟಿಬಾಡಿಗಳು ಕಡಿಮೆಯಾಗೋದಿಲ್ಲ. ಹೀಗಾಗಿ ಮೂರನೇ ಡೋಸ್ ಲಸಿಕೆ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳಿದ್ರು.
ಕೊರೊನಾ ಎರಡನೆ ಅಲೆಯ ಸಂದರ್ಭದಲ್ಲಿ ದೇಶದಲ್ಲಿ ಮಾಸ್ಕ್, ವೆಂಟಿಲೇಟರ್, ಆಮ್ಲಜನಕ, ಬೆಡ್ಗಳು ಸೇರಿದಂತೆ ಅನೇಕ ಸವಾಲುಗಳು ಇದ್ದವು. ಆದ್ರೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಈ ಎಲ್ಲಾ ಸಮಸ್ಯೆಗಳು ಪರಿಹಾರವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ರು.