alex Certify ಈ ಆಟಗಾರರ ವರ್ತನೆಗೆ ಬೇಸತ್ತು ಕೆಲಸ ಬಿಡ್ತಿದ್ದಾರೆ ಅಂಪೈರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಆಟಗಾರರ ವರ್ತನೆಗೆ ಬೇಸತ್ತು ಕೆಲಸ ಬಿಡ್ತಿದ್ದಾರೆ ಅಂಪೈರ್

DPL 2021 umpire Moniruzzaman gives up umpiring after Shakib Al Hasan and Mahmudullah  controversy |DPL: Shakib Al Hasan और Mahmudullah बदतमीजी से परेशान हुआ ये  अंपायर, अपना पद छोड़ने का लिया फैसला|

ಆಟದ ಮೈದಾನದಲ್ಲಿ ಆಟಗಾರರು ಹಾಗೂ ಅಂಪೈರ್ ಮಧ್ಯೆ ಸಣ್ಣಪುಟ್ಟ ವಾದ ವಿವಾದ ಆಗ್ತಿರುತ್ತದೆ. ಆದ್ರೆ ಢಾಕಾ ಪ್ರೀಮಿಯರ್ ಲೀಗ್ 2021 ರಲ್ಲಿ ನಡೆದ ಅನೇಕ ಘಟನೆಗಳು ಅಂಪೈರ್ ಒಬ್ಬರು ಕೆಲಸ ಬಿಡುವಂತೆ ಮಾಡಿದೆ.

ಬಾಂಗ್ಲಾದೇಶದ ಸ್ಟಾರ್ ಆಲ್‌ರೌಂಡರ್ ಶಕೀಬ್ ಅಲ್ ಹಸನ್, ಸ್ಟಂಪ್ ಕಿತ್ತುಹಾಕುವ ಮೂಲಕ ಅಂಪೈರ್ ನಿಂದಿಸಿದ್ದರು. ಅಂಪೈರ್ ನಿರ್ಧಾರದಿಂದ ಅಸಮಾಧಾನಗೊಂಡ ನಂತರ ಮಹಮದುಲ್ಲಾ ಅಂಪೈರ್ ವಿರುದ್ಧ ವಾದಕ್ಕಿಳಿದಿದ್ದರು.

ಶಕೀಬ್ ಅಲ್ ಹಸನ್ ಈ ಕೃತ್ಯದ ವೇಳೆ ಟಿವಿ ಅಂಪೈರ್ ಆಗಿದ್ದ ಮೊನಿರುಜ್ಜಮನ್ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಘಟನೆ ಮನಸ್ಸಿಗೆ ಆಘಾತವನ್ನುಂಟು ಮಾಡಿದೆ. ಇನ್ನು ಮುಂದೆ ಅಂಪೈರಿಂಗ್ ಮಾಡಲು ಬಯಸುವುದಿಲ್ಲ. ನನಗೆ ಸ್ವಾಭಿಮಾನವಿದ್ದು, ನಾನು ಅದರ ಜೊತೆ ಬದುಕಲು ಬಯಸುತ್ತೇನೆ. ಅಂಪೈರ್‌ಗಳಿಂದಲೂ ಕೆಲವೊಮ್ಮೆ ತಪ್ಪುಗಳಾಗುತ್ತದೆ. ಆದ್ರೆ ಅವರ ಜೊತೆ ಹೀಗೆ ನಡೆದುಕೊಳ್ಳುವುದು ಎಷ್ಟು ಸರಿ. ನಾನು ಕೇವಲ ಹಣಕ್ಕಾಗಿ ಕೆಲಸ ಮಾಡುವುದಿಲ್ಲವೆಂದು ಮೊನಿರುಜ್ಜಮನ್ ಹೇಳಿದ್ದಾರೆ.

ನಾನು ಶಕೀಬ್ ಪಂದ್ಯದ ಭಾಗವಾಗಿರಲಿಲ್ಲ. ನಾನು ಟಿವಿ ಅಂಪೈರ್ ಆಗಿದ್ದೆ. ಬೆಳವಣಿಗೆಯನ್ನು ಹತ್ತಿರದಿಂದ ನೋಡಿದ್ದೇನೆ. ನನಗೆ ಇದನ್ನು ಜೀರ್ಣಿಸಿಕೊಳ್ಳುವುದು ಕಷ್ಟವಾಗ್ತಿದೆ. ಹಾಗಾಗಿ ನಾನು ಇನ್ಮುಂದೆ ಅಂಪೈರಿಂಗ್ ಮಾಡದಿರಲು ನಿರ್ಧರಿಸಿದ್ದೇನೆಂದು ಅವರು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...