BIG NEWS: ರೋಗಿಯ ʼಆರೋಗ್ಯʼ ಪರಿಸ್ಥಿತಿ ಹದಗೆಡುವ ಕುರಿತು 16 ಗಂಟೆ ಮೊದಲೇ ಮುನ್ಸೂಚನೆ ನೀಡಲಿದೆ ಡೋಝೀಯ ಎಐ ಆಧರಿತ ʼಅರ್ಲಿ ವಾರ್ನಿಂಗ್ ಸಿಸ್ಟಮ್ʼ | Kannada Dunia | Kannada News | Karnataka News | India News
ಡೋಝೀಯ ಇಡಬ್ಲ್ಯೂಎಸ್ ರೋಗಿಗಳ ಆರೋಗ್ಯ ಹದಗೆಡುವುದನ್ನು ಸುಮಾರು 16 ಗಂಟೆಗಳ ಮುಂಚಿತವಾಗಿ ಸೂಚಿಸುತ್ತದೆ.
ನಿರಂತರ ನಿಗಾ ವಹಿಸುವಿಕೆಯಿಂದ ಆರೋಗ್ಯ ಸೇವಾ ಸಿಬ್ಬಂದಿಗಳು ಶೇ.10ರಷ್ಟು ಸಮಯವನ್ನು ಉಳಿಸಿದ್ದು, ಪ್ರತೀ ದಿನ ಸರಾಸರಿ 2.4 ಗಂಟೆ ಸಮಯ ಉಳಿತಾಯವಾಗಿದೆ.
ಈ ಕುರಿತು ಕೆಜಿಎಂಯುವ ವೈದ್ಯಕೀಯ ವಿಭಾಗದ ಪ್ರಾಧ್ಯಾಪಕ ಡಾ. ಹಿಮಾಂಶು ದಂಡು ಅವರು, “ಡೋಝೀಯ ವ್ಯವಸ್ಥೆಯು ರೋಗಿಯ ಪರಿಸ್ಥಿತಿ ಹದಗೆಡುವುದನ್ನು ಮೊದಲೇ ಸೂಚಿಸುತ್ತದೆ ಮತ್ತು ನಿರಂತರವಾಗಿ ರೋಗಿಗಳ ನಿಗಾವಹಿಸುತ್ತದೆ. ಭಾರೀ ಸಂಖ್ಯೆಯ ರೋಗಿಗಳಿಗೆ ತಕ್ಕ ಆರೋಗ್ಯ ವ್ಯವಸ್ಥೆ ಒದಗಿಸುವ ಬೇಡಿಕೆಗೆ ಅನುಗುಣವಾಗಿ ಇದು ಉತ್ತಮವಾದ ಮತ್ತು ಕೈಗೆಟುಕುವ ದರದ ಪರಿಹಾರವನ್ನು ಒದಗಿಸುತ್ತದೆ. ರೋಗಿಯ ಆರೋಗ್ಯ ಕ್ಷೀಣವಾಗುವ ಸೂಚನೆಗಳನ್ನು ಮೊದಲೇ ಪತ್ತೆಹಚ್ಚುವ ಸಾಮರ್ಥ್ಯವು ಅವರ ಬದುಕುಳಿಯುವಿಕೆಯ ಸಾಧ್ಯತೆಯನ್ನು ಹೆಚ್ಚು ಮಾಡುತ್ತದೆ” ಎಂದು ಹೇಳಿದರು.
ಪ್ಯಾರಿಸ್-ಸೆಕ್ಲೇ ವಿಶ್ವವಿದ್ಯಾನಿಲಯದ ವಿಶ್ವ-ಪ್ರಸಿದ್ಧ ಇಂಟೆನ್ಸಿವಿಸ್ಟ್ ಮತ್ತು ತುರ್ತು ಚಿಕಿತ್ಸೆ ಪರಿಣಿತರಾದ ಡಾ. ಜೀನ್-ಲೂಯಿಸ್ ಟೆಬೌಲ್ ಅವರು, “ಭಾರತದಲ್ಲಿ ನಾವು ಮಾಡಿರುವ ಈ ಸಾಧನೆಯು ಜಾಗತಿಕ ಮಟ್ಟದಲ್ಲಿ ಆರೋಗ್ಯ ಸೇವಾ ಕ್ಷೇತ್ರವನ್ನು ಬದಲಿಸುವ ಸಾಮರ್ಥ್ಯ ಹೊಂದಿದೆ. ಸಮಸ್ಯೆಗಳು ಬೇರೆ ಆಗಿರಬಹುದು, ಆದರೆ ಸಮಾನವಾದ, ಸಮಯೋಚಿತವಾದ ಮತ್ತು ಕೈಗೆಟುಕುವ ದರದ ಚಿಕಿತ್ಸೆಯ ಅಗತ್ಯ ಎಲ್ಲಾ ಕಾಲದಲ್ಲೂ, ಎಲ್ಲಾ ಸ್ಥಳದಲ್ಲೂ ಇದೆ” ಎಂದು ಹೇಳಿದರು.
ಈ ಕುರಿತು ಮಾತನಾಡಿದ ಡೋಝೀಯ ಸಹ ಸಂಸ್ಥಾಪಕ ಮತ್ತು ಸಿಇಓ ಗೌರವ್ ಪರ್ಚಾನಿ ಅವರು, “ನಾವು ಇದುವರೆಗೆ ಏನು ನಂಬಿಕೊಂಡು ಬಂದಿದ್ದೇವೋ ಅದನ್ನು ಈ ಸಂಶೋಧನಾತ್ಮಕ ಅಧ್ಯಯನದ ಫಲಿತಾಂಶಗಳು ದೃಢಪಡಿಸಿವೆ. ಜೊತೆಗೆ ಆರೋಗ್ಯ ಸೇವೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸುವ, ಸುಲಭವಾಗಿಸುವ ಮತ್ತು ಸಮಾನವಾಗಿಸುವ ಈ ತಂತ್ರಜ್ಞಾನದ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ನಾವು ಈ ಮೂಲಕ ಕೇವಲ ಭಾರತದ ಸಮಸ್ಯೆಯನ್ನು ಮಾತ್ರ ಪರಿಹರಿಸುತ್ತಿಲ್ಲ, ಜೊತೆಗೆ ಜಾಗತಿಕ ಆರೋಗ್ಯ ಸೇವಾ ಕ್ಷೇತ್ರಕ್ಕೆ ನೆರವು ಒದಗಿಸುವ ನಿಟ್ಟಿನಲ್ಲಿ ಮುಂದೆ ಹೆಜ್ಜೆ ಇಟ್ಟಿದ್ದೇವೆ” ಎಂದು ಹೇಳಿದರು.