
ಹುಬ್ಬಳ್ಳಿ: ವರದಕ್ಷಿಣೆ ತರುವಂತೆ ಪತ್ನಿಯನ್ನು ಹಿಂಸಿಸುತ್ತಿದ್ದ ಪತಿ ಮಹಾಶಯ, ಆಕೆಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯ ವಿಶಾಲನಗರದಲ್ಲಿ ನಡೆದಿದೆ.
ಹೀನಾ ಕೌಸರ್ (28) ಕೊಲೆಯಾಗಿರುವ ಮಹಿಳೆ. ಎರಡು ವರ್ಷಗಳ ಹಿಂದೆ ಮೊಹಮ್ಮದ್ ಅಜರುದ್ದೀನ್ ಎಂಬಾತನೊಂದಿಗೆ ವಿವಾಹವಾಗಿದ್ದ ಹೀನಾಳಿಗೆ ಪತಿ ಹಾಗೂ ಕುಟುಂಬದವರು ವರದಕ್ಷಿಣೆಗಾಗಿ ಪೀಡಿಸುತ್ತಿದ್ದರು. ಹಲವು ಬಾರಿ ಹಿರಿಯರು ಮೊಹಮ್ಮದ್ ಅಜರುದ್ದೀನ್ ಹಾಗೂ ಆತನ ಮನೆಯವರಿಗೆ ಬುದ್ಧಿವಾದ ಹೇಳಿದ್ದರು. ಆದರೂ ಹೀನಾ ಕೌಸರ್ ಗೆ ಕಿರುಕುಳ ನೀಡುವುದನ್ನು ನಿಲ್ಲಿಸಿರಲಿಲ್ಲ.
ವರದಕ್ಷಿಣೆ ತರುವಂತೆ ಹೀನಾಳಿಗೆ ಮೊಹಮ್ಮದ್ ಹಿಂಸೆ ನೀಡುತ್ತಿದ್ದ. ಕುಟುಂಬದವರು ಆಕೆಯೊಂದಿಗೆ ಜಗಳವಾಡಿದ್ದರು. ಇದೀಗ ಪತಿ ಮೊಹಮ್ಮದ್ ಹಾಗೂ ಅತ್ತೆ ಮಾವ, ನಾದಿನಿ ಸೇರಿ ಹೀನಾ ಕೌಸರ್ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೀನಾ ಕೌಸರ್ ತಂದೆ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಖಲಿಸಿದ್ದಾರೆ.