ಚಿಕ್ಕಬಳ್ಳಾಪುರ: ಕೌಟುಂಬಿಕ ಕಲಹಕ್ಕೆ ಮಹಿಳಾ ಟೆಕ್ಕಿಯೋರ್ವರು ಬಲಿಯಾದ ಘಟನೆ ಚಿಕ್ಕಬಳ್ಳಾಪುರದ ಪ್ರಶಾಂತ್ ನಗರದಲ್ಲಿ ನಡೆದಿದೆ.
ಉಕ್ರೇನ್ – ರಷ್ಯಾ ಬಿಕ್ಕಟ್ಟು: ಪ್ರಧಾನಿ ನರೇಂದ್ರ ಮೋದಿ ಬಳಿ ಬೆಂಬಲ ಕೋರಿದ ಉಕ್ರೇನ್
23 ವರ್ಷದ ನವ್ಯಾ ಎಸ್.ಆರ್. ಮೃತ ಮಹಿಳಾ ಟೆಕ್ಕಿ. ಚಿಕ್ಕಬಳ್ಳಾಪುರದ ಪತಿಯ ಮನೆಯಲ್ಲಿಯೇ ನೇಣು ಬಿಗಿದ ಸ್ಥಿತಿಯಲ್ಲಿ ನವ್ಯಾ ಮೃತದೇಹ ಪತ್ತೆಯಾಗಿದ್ದು, ಪತಿಯ ಮನೆಯವರೇ ಕೊಲೆ ಮಾಡಿ ನೇಣು ಬಿಗಿದಿದ್ದಾರೆ ಎಂದು ನವ್ಯಾ ತಂದೆ-ತಾಯಿ ಆರೋಪಿಸಿದ್ದಾರೆ.
ನವ್ಯಾಳಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದು, ಪತಿ ಮನೆಯವರೇ ಹತ್ಯೆ ಮಾಡಿದ್ದಾರೆ ಎಂದು ನವ್ಯಾ ಪೋಷಕರು ಚಿಕ್ಕಬಳ್ಳಾಪುರ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.