
ಸಚಿವರ ಅವಹೇಳನಕಾರಿ ಹೇಳಿಕೆಯಿಂದ ಭಾರತದೊಂದಿಗೆ ರಾಜತಾಂತ್ರಿಕವಾಗಿ ವಿವಾದದಲ್ಲಿರುವ ಮಾಲ್ಡೀವ್ಸ್ ನ ಪ್ರವಾಸೋದ್ಯಮ ಮಾತ್ರವಲ್ಲ, ಅಲ್ಲಿನ ಮಧ್ಯಮ ವರ್ಗದವರ ಆರೋಗ್ಯದ ಬಗ್ಗೆಯೂ ಚಿಂತೆಗೀಡು ಮಾಡಿದೆ. ಅದೇನೆಂದರೆ ದಾಖಲೆಗಳ ಪ್ರಕಾರ ಬಾಂಗ್ಲಾದೇಶ ಮತ್ತು ಇರಾಕ್ ನಂತರ ಭಾರತವು ಮಾಲ್ಡೀವ್ಸ್ ನ ರೋಗಿಗಳಿಗೆ ಹೆಚ್ಚು ಬೇಡಿಕೆಯಿರುವ ತಾಣವಾಗಿದೆ. ಎರಡೂ ದೇಶಗಳ ನಡುವೆ ರಾಜತಾಂತ್ರಿಕ ಗಲಾಟೆಗಳು ನಡೆಯುತ್ತಿದ್ದಂತೆ ಮಾಲ್ಡೀವ್ಸ್ ನ ಜನರು ತಮ್ಮ ಜೀವನೋಪಾಯ ಮತ್ತು ಆರೋಗ್ಯದ ಬಗ್ಗೆ ಕಾಳಜಿಯ ಚಿಂತೆಯಲ್ಲಿದ್ದಾರೆ.
ಮಾಲ್ಡೀವ್ಸ್ ಪ್ರವಾಸೋದ್ಯಮ ಆಧಾರಿತ ಆರ್ಥಿಕತೆಯಲ್ಲಿ ಮುಂದಿದ್ದರೆ, ವಿಶೇಷ ವೈದ್ಯಕೀಯ ಆರೈಕೆ ಸೇವೆಯಲ್ಲಿ ಭಾರತವು ಅತ್ಯಂತ ಅಪೇಕ್ಷಿತ ತಾಣವಾಗಿದೆ.
ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಉದ್ವಿಗ್ನತೆ ಮುಂದುವರೆದಂತೆ, ಹಲವಾರು ಮಾಲ್ಡೀವಿಯನ್ನರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ.
“ನಾವು ಮಾಲ್ಡೀವಿಯನ್ನರು ಆಹಾರ, ವೈದ್ಯಕೀಯ ತಜ್ಞರು/ಶಸ್ತ್ರಚಿಕಿತ್ಸೆಗಳಿಗಾಗಿ ಭಾರತವನ್ನು ಹೆಚ್ಚು ಅವಲಂಬಿಸಿದ್ದೇವೆ. ವಿವಿಧ ವೈದ್ಯಕೀಯ ಪರಿಸ್ಥಿತಿಗಳಿಂದ ಬಳಲುತ್ತಿರುವ ಮಾಲ್ಡೀವಿಯನ್ನರಿಗೆ ರಾಜತಾಂತ್ರಿಕ ಅನಿಶ್ಚಿತತೆಯು ಭಯಾನಕವಾಗಿದೆ. ನಮ್ಮ ಯೋಗಕ್ಷೇಮಕ್ಕೆ ಅಪಾಯ ತಂದಿರುವ ಈ ಮಂತ್ರಿಗಳು ಮತ್ತು ರಾಜಕೀಯ ವ್ಯಕ್ತಿಗಳು ಜವಾಬ್ದಾರರಾಗಿರಬೇಕು”ಎಂದು ಮಾಲ್ಡೀವ್ಸ್ ನ ನಾಗರಿಕರೊಬ್ಬರು ಟ್ವಿಟರ್ ನಲ್ಲಿ ಹೇಳಿದ್ದಾರೆ. ಈ ಮೂಲಕ ಮಾಲ್ಡೀವ್ಸ್ ನವರು ವೈದ್ಯಕೀಯ ಚಿಕಿತ್ಸೆಗೆ ಭಾರತವನ್ನು ಅವಲಂಬಿಸಿದ್ದಾರೆ.
“ಸಾಂಸ್ಕೃತಿಕ, ಐತಿಹಾಸಿಕ ಅಥವಾ ವೈದ್ಯಕೀಯ ಪ್ರವಾಸೋದ್ಯಮದಲ್ಲಿ ಮಾಲ್ಡೀವ್ಸ್ ಭಾರತವನ್ನು ಸೋಲಿಸಲು ಸಾಧ್ಯವಿಲ್ಲ. ಅವರು ನಮಗಿಂತ ಬಹಳ ಮುಂದಿದ್ದಾರೆ, ”ಎಂದು ತೋಹಾ ರಶೀದ್ ಎಂಬ ಹೆಸರಿನ ಇನ್ನೊಬ್ಬರು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಭಾರತ ಸರ್ಕಾರದ ಪ್ರಕಾರ ಕೋವಿಡ್ ಪೂರ್ವದ ಸಮಯದಲ್ಲಿ ಮಾಲ್ಡೀವ್ಸ್ ನಿಂದ ಬರುವ ರೋಗಿಗಳ ಸಂಖ್ಯೆಯಲ್ಲಿ ಏರಿಕೆ ಕಂಡಿತ್ತು.