alex Certify ದುಪ್ಪಟ್ಟು ಲಾಭದ ಆಮಿಷ ನಂಬಿ ವಂಚನೆಗೊಳಗಾದ ಪೊಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದುಪ್ಪಟ್ಟು ಲಾಭದ ಆಮಿಷ ನಂಬಿ ವಂಚನೆಗೊಳಗಾದ ಪೊಲೀಸ್

ಬೆಳಗಾವಿ: ದುಪ್ಪಟ್ಟು ಲಾಭದ ಆಮಿಷ ನಂಬಿದ ಪೊಲೀಸ್ ಕಾನ್ಸ್ಟೇಬಲ್ ಆನ್ಲೈನ್ ಟ್ರೇಡಿಂಗ್ ನಲ್ಲಿ ಹಣ ಹೂಡಿಕೆ ಮಾಡಿ ವಂಚನೆಗೆ ಒಳಗಾಗಿದ್ದಾರೆ.

ಈ ಕುರಿತು ಬೆಳಗಾವಿಯ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಗಣೇಶಪುರದ ಸೈನಿಕ ನಗರದ ಪೊಲೀಸ್ ಕಾನ್ಸ್ಟೇಬಲ್ ನಿಂಗಪ್ಪ ಹಣ ಕಳೆದುಕೊಂಡವರು. ಡಿಸೆಂಬರ್ 19 ರಂದು ನಿಂಗಪ್ಪ ಅವರ ಮೊಬೈಲ್ ಸಂಖ್ಯೆಗೆ ಆನ್ಲೈನ್ ಟ್ರೇಡಿಂಗ್ ನಿಂದ ಹಣ ಸಂಪಾದಿಸುವ ಮಾಹಿತಿ ಇರುವ ಲಿಂಕ್ ಬಂದಿದೆ. ಅದಕ್ಕೆ ಪ್ರತಿಕ್ರಿಸಿದ ನಿಂಗಪ್ಪ ಮೊದಲಿಗೆ 970 ರೂ. ಹೂಡಿಕೆ ಮಾಡಿದ್ದಾರೆ. ಇದಾದ ನಂತರ ಹಂತ ಹಂತವಾಗಿ 5.75 ಲಕ್ಷ ರೂ. ಹೂಡಿಕೆ ಮಾಡಿದ್ದು, ನಂತರ ಅವರಿಗೆ ವಂಚನೆಗೊಳಗಾಗಿರುವುದು ಗೊತ್ತಾಗಿದೆ.

ಸಿಇಎನ್ ಪೊಲೀಸ್ ಠಾಣೆಗೆ ವಂಚನೆಗೊಳಗಾದ ನಿಂಗಪ್ಪ ದೂರು ನೀಡಿದ್ದು, ಪೊಲೀಸರು ಕ್ರಮ ಕೈಗೊಂಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...