ಬೆಂಗಳೂರು: ಬೆಂಗಳೂರಿನಲ್ಲಿ ಡಾಪ್ಲರ್ ವೆದರ್ ರಾಡಾರ್ ಸ್ಥಾಪಿಸುವಂತೆ ಕೇಂದ್ರ ಎಂಎಸ್ಎಂಇ ಮತ್ತು ಕಾರ್ಮಿಕ ಇಲಾಖೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಪತ್ರ ಬರೆದು ಮನವಿ ಮಾಡಿದ್ದಾರೆ.
ಬೆಂಗಳೂರು ನಗರ ಸಿಲಿಕಾನ್ ವ್ಯಾಲಿ ಎಂದೇ ಹೆಸರಾಗಿದೆ. ಬೆಂಗಳೂರು ಮಹಾನಗರದಲ್ಲಿ ಮುನ್ಸೂಚನೆ ಇಲ್ಲದೆ ಅವಘಡ ಸಂಭವಿಸುತ್ತಿವೆ. ಹೆಚ್ಚಿನ ಮಳೆ, ದಿಢೀರ್ ಪ್ರವಾಹದಿಂದ ಜನ ತೊಂದರೆ ಅನುಭವಿಸುತ್ತಾರೆ. ಮುನ್ಸೂಚನೆ ನೀಡುವ ಮೂಲಕ ಅನಾಹುತ, ತೊಂದರೆ ತಪ್ಪಿಸಲು ಸುಧಾರಿತ ಹವಾಮಾನ ಮುನ್ಸೂಚನೆ ವ್ಯವಸ್ಥೆ ಬೇಕಿದೆ. ಡಾಪ್ಲರ್ ವೆದರ್ ರಾಡರ್ ಸ್ಥಾಪನೆಗೆ ಬೆಂಗಳೂರಿನ ವ್ಯವಸ್ಥೆ ಪೂರಕವಾಗಿದೆ. ಹೀಗಾಗಿ ಡಾಪ್ಲರ್ ವೆದರ್ ರಾಡಾರ್ ಸ್ಥಾಪನೆ ಮಾಡಬೇಕೆಂದು ಮನವಿ ಮಾಡಿದ್ದಾರೆ.