ಮಕ್ಕಳಿಗೆ ಊಟ ಮಾಡಿಸುವುದು ಸಾಮಾನ್ಯ ಸಂಗತಿಯಲ್ಲ. ಚಾಕೋಲೇಟ್, ಐಸ್ ಕ್ರೀಂಗಳನ್ನು ಆರಾಮವಾಗಿ ತಿನ್ನುವ ಮಕ್ಕಳು ಪೌಷ್ಠಿಕ ಆಹಾರವೆಂದ್ರೆ ದೂರ ಹೋಗ್ತಾರೆ. ಹಾಗಂತ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡದೆ ಬಿಡಲು ಸಾಧ್ಯವಿಲ್ಲ. ಇದು ಮಕ್ಕಳ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಮಕ್ಕಳು ಸುಲಭವಾಗಿ ನೀವು ನೀಡುವ ಆಹಾರ ತಿನ್ನಬೇಕೆಂದ್ರೆ ಕೆಲವೊಂದು ಟ್ರಿಕ್ಸ್ ಉಪಯೋಗಿಸಿ.
ನೀವು ಬ್ರೆಡ್ ನೀಡಲು ಬಯಸಿದ್ದರೆ, ಬ್ರೆಡ್ ಮೇಲೆ ಕೆಚಪ್ ನ ಸ್ಮೈಲಿ ಬರೆದು ಕೊಡಿ. ಇದು ಮಕ್ಕಳನ್ನು ಆಕರ್ಷಿಸುತ್ತದೆ. ದೋಸೆ ಅಥವ ರೊಟ್ಟಿ ಮಾಡಿದ್ದರೆ ಅದ್ರ ಮೇಲೆ ಮುಖದ ಚಿತ್ರ ಬಿಡಿಸಿ.
ಒಂದೇ ಬಾರಿ ಆಹಾರವನ್ನು ಮಕ್ಕಳಿಗೆ ನೀಡಬೇಡಿ. ಇದು ಮಕ್ಕಳಿಗೆ ಕಿರಿಕಿರಿಯುಂಟು ಮಾಡುತ್ತದೆ.
ಮಕ್ಕಳಿಗೆ ಸ್ವಲ್ಪ ಸಮಯ ಬಿಟ್ಟು ಬಿಟ್ಟು ಆಹಾರ ನೀಡುತ್ತ ಬನ್ನಿ. ಇದಕ್ಕೆ ಒಂದು ಸಮಯ ನಿಗದಿ ಮಾಡಿಕೊಳ್ಳಿ. ಪ್ರತಿ ದಿನ ಒಂದೇ ಸಮಯದಲ್ಲಿ ನೀವು ಆಹಾರ ನೀಡುತ್ತ ಬಂದ್ರೆ ಆ ಸಮಯ ಬರ್ತಿದ್ದಂತೆ ಮಕ್ಕಳಿಗೆ ಹಸಿವಾಗುತ್ತದೆ. ಆಗ ಅವ್ರೇ ನಿಮ್ಮ ಬಳಿ ಬರ್ತಾರೆ.
ನಿಮ್ಮ ಮಕ್ಕಳಿಗೆ ಯಾವ ಕಾರ್ಟೂನ್ ಇಷ್ಟ ಎಂಬುದನ್ನು ನೋಡಿಕೊಳ್ಳಿ. ಅವ್ರ ಕಥೆ ಹೇಳುತ್ತ ಮಕ್ಕಳಿಗೆ ಆಹಾರ ನೀಡಿ.
ಒಂದೇ ರೀತಿಯ ಆಹಾರ ದೊಡ್ಡವರಿಗೆ ಬೋರ್ ಆಗುತ್ತದೆ. ಇನ್ನು ಮಕ್ಕಳಿಗೆ ಕೇಳಬೇಕಾ? ಹಾಗಾಗಿ ಪ್ರತಿ ದಿನ ಮಕ್ಕಳಿಗೆ ಬೇರೆ ಬೇರೆ ಆಹಾರವನ್ನು ನೀಡಿ. ಅದ್ರಲ್ಲಿ ಪೌಷ್ಠಿಕಾಂಶ ಇರುವಂತೆ ನೋಡಿಕೊಳ್ಳಿ.