ದಿನಕ್ಕೆ ಮೂರರಿಂದ ನಾಲ್ಕು ಲೀಟರ್ ನೀರು ಕುಡಿಯಬೇಕು ಎಂದು ಹಲವರು ಹೇಳಿರುವುದನ್ನು ನೀವು ಕೇಳಿರುತ್ತೀರಿ. ಆದರೆ ಅರ್ಧ ಲೋಟ ನೀರು ಕುಡಿದಾಕ್ಷಣ ಹೊಟ್ಟೆ ತುಂಬಿದ ಅನುಭವವಾಗುತ್ತಿದ್ದರೆ ಹೀಗೆ ಮಾಡಿ.
ಬರಿ ನೀರು ರುಚಿ ಎನಿಸದಿದ್ದರೆ ನೀರಿಗೆ ಒಂದರೆಡು ಹನಿ ನಿಂಬೆರಸ ಸೇರಿಸಿ ಕುಡಿಯಿರಿ. ಇದರಿಂದ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಇದರಲ್ಲಿ ವಿಟಮಿನ್ ಸಿ ಕೂಡಾ ಹೇರಳವಾಗಿದ್ದು ದೇಹವನ್ನು ಹಲವು ರೋಗಗಳಿಂದ ರಕ್ಷಿಸುತ್ತದೆ.
ಶುಂಠಿ ನಿಮಗಿಷ್ಟವಾಗಿದ್ದರೆ ಅದನ್ನೂ ಕುದಿಯುವ ನೀರಿಗೆ ಹಾಕಿಡಿ. ತಣ್ಣಗಾದ ಬಳಿಕ ನೀರು ಕುಡಿಯಿರಿ. ಇದರ ಸುವಾಸನೆಗೆ ನಿಮಗೆ ನೀರು ಕುಡಿದಷ್ಟೂ ಬೇಸರವಾಗುವುದಿಲ್ಲ. ಪುದೀನಾ ಎಲೆಗಳನ್ನು ನೀರಿಗೆ ಹಾಕಿ ಕುಡಿಯುವುದರಿಂದ ದಿನವಿಡೀ ಫ್ರೆಶ್ ಆಗಿರಬಹುದು. ಮನಸ್ಸು ಉಲ್ಲಾಸ ಭರಿತವಾಗಿರುತ್ತದೆ.
ಸೌತೆಕಾಯಿ ಕತ್ತರಿಸಿ ಅದರ ತುಂಡುಗಳನ್ನು ನೀರಿಗೆ ಹಾಕಿ ಸ್ವಲ್ಪ ಹೊತ್ತು ಬಿಡಿ. ಆ ನೀರನ್ನು ಕುಡಿಯುವುದರಿಂದ ದೇಹಕ್ಕೂ ಶಕ್ತಿ, ಮನಸ್ಸಿಗೂ ಉಲ್ಲಾಸ ಸಿಗುತ್ತದೆ. ಕಿತ್ತಳೆ ಹಣ್ಣಿನ ರಸ ನೀರಿಗೆ ಬೆರೆಸಿ ಕುಡಿಯುವುದು ಬಹಳ ಒಳ್ಳೆಯದು.