ಕೊಲೆಸ್ಟ್ರಾಲ್ ಎಂಬುದು ಬಲು ಕೆಟ್ಟದ್ದು. ಇದರಿಂದಾಗಿ ಹೃದಯಕ್ಕೆ ಹಾನಿ ಉಂಟಾಗುತ್ತದೆ ಎಂದು ಬಹುತೇಕರು ತಪ್ಪು ತಿಳಿದುಕೊಂಡಿದ್ದಾರೆ. ಅದರಲ್ಲೂ ಗುಡ್ ಕೊಲೆಸ್ಟ್ರಾಲ್ ಹಾಗೂ ಬ್ಯಾಡ್ ಕೊಲೆಸ್ಟ್ರಾಲ್ ಎಂಬ ಎರಡು ವಿಧಗಳಿವೆ.
ಕಡಿಮೆ ಸಾಂದ್ರತೆಯ ಲಿಪೊ ಪ್ರೊಟಿನ್ ಕೆಟ್ಟ ಕೊಲೆಸ್ಟ್ರಾಲ್. ದೇಹದಲ್ಲಿ ಇದು ಹೆಚ್ಚಾದರೆ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತವೆ. ಶಿಸ್ತುಬದ್ಧವಲ್ಲದ ಜೀವನ ಶೈಲಿ ಹಾಗೂ ಅನಾರೋಗ್ಯಕರ ಆಹಾರ ಪದ್ಧತಿ ಸೇವನೆಯಿಂದ ಇದು ವೇಗವಾಗಿ ಏರುತ್ತದೆ.
ಹೆಚ್ಚಿನ ಸಾಂದ್ರತೆಯ ಲಿಪೊಪ್ರೊಟಿನ್ ಒಳ್ಳೆಯ ಕೊಲೆಸ್ಟ್ರಾಲ್ ಆಗಿದೆ. ಇದು ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಗಟ್ಟಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ನೆರವಾಗುತ್ತದೆ. ರಕ್ತದ ಕಣಗಳಿಂದ ಕೆಟ್ಟ ಕೊಲೆಸ್ಟ್ರಾಲ್ ನ್ನು ಇದು ತೊಡೆದು ಹಾಕುತ್ತದೆ.
ಹೆಚ್ಚಿನ ಸಾಂದ್ರತೆಯ ಲಿಪೊಪ್ರೊಟಿನ್ ರಕ್ತಕಣಗಳಲ್ಲಿ ಶೇ.20 ರಿಂದ 30 ರಷ್ಟು ಕೊಲೆಸ್ಟ್ರಾಲ್ ಬಂದರೆ, ಕಡಿಮೆ ಸಾಂದ್ರತೆಯ ಲಿಪೊಪ್ರೊಟಿನ್ ನಿಂದ ಶೇ.60 ರಿಂದ 70 ಇರುತ್ತದೆ. ಹಾಗಾಗಿ ಕೊಲೆಸ್ಟ್ರಾಲ್ ಎಂದರೆ ಅದೊಂದು ರೋಗವೆಂದು ದೂರ ಓಡದಿರಿ. ಅದನ್ನು ಸಮತೋಲನದಲ್ಲಿ ಇಡುವುದು ಹೇಗೆಂದು ತಿಳಿಯಿರಿ.