ಆಚಾರ್ಯ ಚಾಣಕ್ಯ ಜೀವನಕ್ಕೆ ಸಂಬಂಧಿಸಿದ ಪ್ರಮುಖ ಅಂಶಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಚಾಣಕ್ಯ ನೀತಿಯ ಪ್ರಕಾರ, ದುಷ್ಟ ವ್ಯಕ್ತಿಗೆ ಪರಿಶುದ್ಧತೆ ಇರಲು ಸಾಧ್ಯವಿಲ್ಲ. ಬೇವಿನ ಮರವು ಎಂದಿಗೂ ಸಿಹಿಯಾಗಿರಲು ಸಾಧ್ಯವಿಲ್ಲ. ಹಾಗೆ ದುಷ್ಟವ್ಯಕ್ತಿ ಸರಿಯಾಗಲು ಸಾಧ್ಯವಿಲ್ಲ ಎಂದಿದ್ದಾರೆ. ಉತ್ತಮ ಗುರಿ, ಕೆಲಸದಿಂದ ಮಾತ್ರ ಜೀವನದಲ್ಲಿ ಮನುಷ್ಯ ಯಶಸ್ಸು ಗಳಿಸಲು ಸಾಧ್ಯವೆಂದು ಚಾಣಕ್ಯ ಹೇಳಿದ್ದಾರೆ.
ಚಾಣಕ್ಯ ನೀತಿ ಪ್ರಕಾರ, ಪ್ರತಿಯೊಬ್ಬರೂ ಒಳ್ಳೆ ಕೆಲಸ ಮಾಡಬೇಕು. ಹಣಕ್ಕೆ ಶಾಶ್ವತ ಮೌಲ್ಯವಿಲ್ಲ. ಸಾವು ಯಾವಾಗಲೂ ನಮ್ಮ ಹತ್ತಿರದಲ್ಲಿದೆ. ಹಾಗಾಗಿ ನಾವು ಸದಾ ಪುಣ್ಯ ಕೆಲಸ ಮಾಡಬೇಕು. ಇದ್ರಿಂದ ಜೀವನದಲ್ಲಿ ಯಶಸ್ಸು ಅರಸಿ ಬರುತ್ತದೆ.
ಆಚಾರ್ಯ ಚಾಣಕ್ಯ ಪ್ರಕಾರ ಸತ್ಯ ತಾಯಿಯೆಂದು, ಆಧ್ಯಾತ್ಮಿಕ ಜ್ಞಾನವನ್ನು ತಂದೆ ಎಂದು ನಂಬಬೇಕು. ಆಂತರಿಕ ಮನಸ್ಸಿನ ಶಾಂತಿ ಹೆಂಡತಿ ಎಂದೂ ಕ್ಷಮೆ ನನ್ನ ಮಗನೆಂದೂ ನಂಬಬೇಕಂತೆ.
ಚಾಣಕ್ಯರ ಪ್ರಕಾರ, ಮನೆಕೆಲಸಗಳಲ್ಲಿ ತೊಡಗಿರುವ ವ್ಯಕ್ತಿ ಎಂದಿಗೂ ಜ್ಞಾನವನ್ನು ಪಡೆಯಲು ಸಾಧ್ಯವಿಲ್ಲ. ದುರಾಸೆಯ ವ್ಯಕ್ತಿ ಎಂದಿಗೂ ಸತ್ಯವನ್ನು ಮಾತನಾಡಲು ಸಾಧ್ಯವಿಲ್ಲ. ಬೇಟೆಗಾರನಿಗೆ ಎಂದಿಗೂ ಶುದ್ಧತೆ ಇರಲು ಸಾಧ್ಯವಿಲ್ಲ ಎಂದಿದ್ದಾರೆ.
ದುರಹಂಕಾರಿ, ಸ್ವಾರ್ಥಿ, ಮೋಸಗಾರ, ಇತರರ ಕೆಲಸಕ್ಕೆ ಅಡ್ಡಿಯುಂಟುಮಾಡುವ ವ್ಯಕ್ತಿ ಜನರನ್ನು ದ್ವೇಷಿಸುತ್ತಾನೆ. ಈ ವ್ಯಕ್ತಿಯು ಮಾತನಾಡುವಾಗ ಬಾಯಿಯಲ್ಲಿ ಮಾಧುರ್ಯ ಮತ್ತು ಹೃದಯದಲ್ಲಿ ಕ್ರೌರ್ಯವನ್ನು ಇಟ್ಟಿರುತ್ತಾನೆಂದು ಚಾಣಕ್ಯರು ಹೇಳಿದ್ದಾರೆ. ಹಾಗಾಗಿ ಈ ವ್ಯಕ್ತಿಗಳನ್ನು ಯಾವುದೇ ಸಮಯದಲ್ಲಿ ನಂಬಬಾರದು. ಸಂಕಷ್ಟದ ಸಂದರ್ಭದಲ್ಲಿ ಅಪ್ಪಿತಪ್ಪಿಯೂ ಇವರನ್ನು ನಂಬಬಾರದು.