ಹೊತ್ತು ಗೊತ್ತು, ಸಮಯ ಸಂದರ್ಭವಿಲ್ಲದೆ ಬರುವ ಆಕಳಿಕೆ ಕೆಲವೊಮ್ಮೆ ಮುಜುಗರ ಉಂಟು ಮಾಡುತ್ತದೆ. ಆದರೆ ಇದು ಹೊರಹೋಗುವುದರಿಂದ ನಮ್ಮ ದೇಹಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ನಿಮಗೆ ಗೊತ್ತೇ…?
ಕೆಲಸವಿಲ್ಲದಿರುವಾಗ, ನಿದ್ದೆ ಬರುವಾಗ ಮತ್ತು ಬೋರ್ ಆಗುವಾಗ ಹೀಗೆ ಬಾಯಿ ತೆಗೆದು ಆಕಳಿಸುವುದರಿಂದ ಹೆಚ್ಚಿನ ಅಮ್ಲಜನಕ ಮೆದುಳಿಗೆ ಪೂರೈಕೆಯಾಗಿ ಬಿಸಿ ರಕ್ತ ಕೆಳಗೆ ಹರಿಯುತ್ತದೆ. ಇದರಿಂದ ಮೆದುಳಿನ ತಾಪಮಾನ ಕಡಿಮೆಯಾಗುತ್ತದೆ.
ಇದು ದೇಹದಲ್ಲಿರುವ ಹೆಚ್ಚಿನ ಪ್ರಮಾಣದ ಇಂಗಾಲದ ಡೈ ಆಕ್ಸೈಡ್ ಅನ್ನು ಹೊರಹಾಕುತ್ತದೆ. ವಿಮಾನದಲ್ಲಿ ಸಂಚರಿಸುವಾಗ ಗಾಳಿಯ ಒತ್ತಡದಿಂದ ಕಿವಿ ಮುಚ್ಚಿದಂತಾಗುವುದುಂಟು. ಆಗ ನೀವು ದೊಡ್ಡದಾಗಿ ಆಕಳಿಸಿದರೆ ಈ ಸಮಸ್ಯೆ ದೂರವಾಗುತ್ತದೆ.
ಮೆದುಳು ಹೆಚ್ಚು ಒತ್ತಡಕ್ಕೆ ಒಳಗಾದಾಗ ಅದು ಆಕಳಿಕೆಯ ಮೂಲಕ ಅದನ್ನು ಹೊರ ಹಾಕುತ್ತದೆ. ಇದರಿಂದ ಮಾನಸಿಕ ಒತ್ತಡವೂ ಕಡಿಮೆಯಾಗುತ್ತದೆ. ಆಕಳಿಕೆಯನ್ನು ಸಾಂಕ್ರಾಮಿಕ ಎಂದೂ ಕರೆಯಲಾಗುತ್ತದೆ. ನಿಮ್ಮ ಆಕಳಿಕೆ ನಿಮ್ಮ ಪಕ್ಕದವರಿಗೂ ಹಬ್ಬುವುದುನ್ನು ನೀವು ಕಂಡಿರಬಹುದು.