ಹಿಂದೂ ದೇವತೆಗಳನ್ನು ಪೂಜಿಸುವ ಮುನ್ನ ಸಾಕಷ್ಟು ವಿಚಾರಗಳನ್ನು ಗಮನದಲ್ಲಿ ಇಡಬೇಕು. ಪ್ರತಿಯೊಂದು ದೇವತೆಗಳಿಗೂ ಅದರದ್ದೇ ಆದ ನೈವೇದ್ಯ, ಪುಷ್ಪಗಳು, ಪೂಜಾ ವಿಧಾನ ಇರುತ್ತದೆ. ಸದ್ಯ ನವರಾತ್ರಿ ಇರೋದ್ರಿಂದ ಎಲ್ಲಾ ಕಡೆಗಳಲ್ಲಿ ದುರ್ಗಾ ದೇವಿಯನ್ನು ಆರಾಧಿಸಲಾಗುತ್ತದೆ. ಹಾಗಾದರೆ ದುರ್ಗಾ ದೇವಿ ಸೇರಿದಂತೆ ಹಿಂದೂ ದೇವತೆಗಳ ಪ್ರಿಯ ಹೂವು ಯಾವುದು ಎಂಬುದರ ಬಗ್ಗೆ ವಿವರಣೆ ಇಲ್ಲಿದೆ ನೋಡಿ.
ಶ್ರೀ ವಿಷ್ಣುವನ್ನು ಆರಾಧಿಸುವವರು ಎಂದಿಗೂ ಬಿಳಿ ಹಾಗೂ ಹಳದಿ ಬಣ್ಣದ ಹೂವುಗಳನ್ನು ಅರ್ಪಿಸಬೇಕು. ಸೂರ್ಯ ಹಾಗೂ ಗಣಪತಿಗೆ ಕೆಂಪು ಬಣ್ಣದ ಹೂವುಗಳು ಇಷ್ಟವಂತೆ. ಅದೇ ರೀತಿ ಶಿವನ ಪೂಜೆಗೆ ಬಿಳಿ ಬಣ್ಣದ ಹೂವುಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ.
ವಿಷ್ಣುವಿಗೆ ಅಕ್ಷತೆಯನ್ನು ಅರ್ಪಿಸಲಾಗುವುದಿಲ್ಲ. ದುರ್ಗೆಯ ವಿಚಾರಕ್ಕೆ ಬಂದರೆ ಕಮಲ ಹಾಗೂ ಸಂಪಿಗೆ ಆಕೆಗೆ ಅತ್ಯಂತ ಪ್ರಿಯಕರವಾದ ಹೂವುಗಳಾಗಿವೆ. ಆದರೆ ನಾಗಸಂಪಿಗೆ ಹೂವನ್ನು ದೇವತೆಗಳಿಗೆ ಅರ್ಪಿಸುವುದಿಲ್ಲ. ಹೀಗಾಗಿ ಪೂಜಾ ಕಾರ್ಯಕ್ಕೂ ಮುನ್ನ ಈ ಅಂಶಗಳನ್ನು ಗಮನದಲ್ಲಿಡಬೇಕು.