ಗಣಗಳ ಅಧಿಪತಿ ಗಣೇಶ. ಗಣೇಶನಿಗೆ ಆನೆಯ ಮುಖ ಹೇಗೆ ಬಂತು ಅನ್ನೋದು ನಿಮಗೆಲ್ಲಾ ಗೊತ್ತೇ ಇದೆ. ಆನೆಯ ಮುಖವನ್ನು ಹೊತ್ತ ಗಣಪನಿಗೆ ಗಜಾನನ, ಕರಿಮುಖ, ಗಜವದನ ಎಂಬ ಹೆಸರೂ ಇದೆ.
ಸಾಮಾನ್ಯವಾಗಿ ಗಣೇಶ ಚೌತಿಯಂದು ಕಡಬು, ಮೋದಕ ಮಾಡಿ ನೈವೇದ್ಯ ಮಾಡುವುದು ವಾಡಿಕೆ. ಆದರೆ ಗಣೇಶನಿಗೆ ಇದರ ಜೊತೆಗೆ ಮತ್ತೂ ಒಂದಷ್ಟು ತಿನಿಸುಗಳು ಅಂದ್ರೆ ಪಂಚಪ್ರಾಣ.
ಹಸಿ ಕಡಲೇಕಾಯಿ, ಕಬ್ಬು, ಬೆಲ್ಲ, ಬಾಳೆ ಹಣ್ಣು ಇವುಗಳನ್ನು ಮಾತ್ರ ಗಣೇಶನ ನೈವೇದ್ಯಕ್ಕೆ ಮರೆಯಲೇ ಬೇಡಿ.
ವಿನಾಯಕನ ಶರೀರದಲ್ಲಿ ಆನೆಯ ಅಂಶವೂ ಇರುವುದರಿಂದ ಆನೆಗೆ ಇಷ್ಟವಾಗುವ ತಿನಿಸೆಲ್ಲವೂ ಗಣಪನಿಗೂ ಇಷ್ಟವಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಈ ಎಲ್ಲಾ ತಿನಿಸುಗಳನ್ನು ಏಕದಂತನಿಗೆ ಕೊಡಲು ಮರೆಯದಿರಿ.