ಮುಂಬೈ: ಅಮರಾವತಿ ಲೋಕಸಭಾ ಸಂಸದೆ ನವನೀತ್ ರಾಣಾ ಅವರಿಗೆ ಮತ್ತೊಮ್ಮೆ ಈ ಸ್ಥಾನದಿಂದ ಆಯ್ಕೆಯಾಗುವಂತೆ ಸವಾಲು ಹಾಕಿದ್ದು, ತಮ್ಮ ಪಕ್ಷದ ತಾಳ್ಮೆಯನ್ನು ಪರೀಕ್ಷಿಸಲು ಪ್ರಯತ್ನಿಸುವವರು ಭೂಮಿಯ 20 ಅಡಿ ಆಳದಲ್ಲಿ ಹೂತು ಹೋಗುತ್ತಾರೆ ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಎಚ್ಚರಿಸಿದ್ದಾರೆ.
ಮುಂಬೈನಲ್ಲಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಮತ್ತು ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಅವರ ನಿವಾಸ ಮಾತೋಶ್ರೀ ಹೊರಗೆ ಹನುಮಾನ್ ಚಾಲೀಸಾವನ್ನು ಪಠಿಸುವುದಾಗಿ ರಾಣಾ ಮತ್ತು ಅವರ ಶಾಸಕ ಪತಿ ರವಿ ರಾಣಾ ಅವರು ಶನಿವಾರ ಬೆಳಿಗ್ಗೆ ಘೋಷಿಸಿದ್ದರು. ಇದನ್ನು ವಿರೋಧಿಸಿ ಶಿವಸೇನಾ ಕಾರ್ಯಕರ್ತರು ಇವರಿಬ್ಬರ ಖಾರಾ ನಿವಾಸಕ್ಕೆ ಮುತ್ತಿಗೆ ಹಾಕಿದ್ದರು.
ನಾಗ್ಪುರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಂಜಯ್ ರಾವತ್, ಕೆಲವು “ಬೋಗಸ್ ಜನರು” ರಾಜ್ಯದ ವಾತಾವರಣವನ್ನು ಹಾಳುಮಾಡಲು ಪ್ರಯತ್ನಿಸುತ್ತಿದ್ದಾರೆ ಮತ್ತು ಅವರಿಗೆ ಬಿಜೆಪಿ ಬೆಂಬಲ ನೀಡುತ್ತಿದೆ. ದಂಪತಿ ಹೆಸರಿಸದೆ ರಾವತ್ ಅವರು ಹನುಮಾನ್ ಚಾಲೀಸಾವನ್ನು ಪಠಿಸುವುದಾಗಿ ಹೇಳುವವರು ಹಿಂದೊಮ್ಮೆ ಹಿಂದುತ್ವ ಮತ್ತು ಅಯೋಧ್ಯೆ ರಾಮಮಂದಿರ ಚಳವಳಿಯನ್ನು ವಿರೋಧಿಸಿದ್ದರು ಎಂದು ಹೇಳಿದರು.
‘ಶಿವಸೇನೆ’ ಮತ್ತು ‘ಮಾತೋಶ್ರೀ’ ಜೊತೆ ಆಟವಾಡಬೇಡಿ ಎಂದು ನಾನು ಕೇಳಿಕೊಳ್ಳುತ್ತೇನೆ. ಆದರೂ ಅದನ್ನು ಮೀರಿದರೆ, ಅವರು ಭೂಮಿಯ 20 ಅಡಿಗಳಷ್ಟು ಆಳದಲ್ಲಿ ಹೂತುಹೋಗುತ್ತಾರೆ. ಶಿವಸೈನಿಕರ ತಾಳ್ಮೆಯನ್ನು ಪರೀಕ್ಷಿಸಬೇಡಿ ಎಂದು ರಾವತ್ ಹೇಳಿದರು.
ನವನೀತ ಅವರು ಅಮರಾವತಿಯಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲಲು ಬೋಗಸ್ ಸರ್ಟಿಫಿಕೇಟ್ ಬಳಸಿದ್ದಾರೆ. ಇದೊಂದು ಹಗರಣ ಮತ್ತು ಕೇಂದ್ರ ಆಕೆಗೆ ಸಹಾಯ ಮಾಡುತ್ತಿದೆ. ಹೈಕೋರ್ಟ್‌ನಲ್ಲಿ ಕೇಸ್ ಸೋತ ಆಕೆ ಈಗ ಸುಪ್ರೀಂ ಕೋರ್ಟ್‌ನಲ್ಲಿ ಕೇಸ್ ನಡೆಯುತ್ತಿದೆ ಎಂದು ಹೇಳಿದ್ದಾರೆ.