
ಆದರೆ ಮುಖದ ತ್ವಚೆ ಹೇಗೆ ಕಾಪಾಡಿಕೊಳ್ಳುವುದು ಅಂತಾ ಚಿಂತಿಸುತ್ತಿದ್ದೀರಾ..? ಚಿಂತೆ ಬಿಡಿ.. ಮನೆಯಲ್ಲೇ ಸ್ವತಃ ನೀವೇ ಮಾಡಬಹುದು ಮಸಾಜ್, ಸ್ಕ್ರಬ್ಬಿಂಗ್.. ಉತ್ತಮ ಫಲಿತಾಂಶದ ಜೊತೆಗೆ ಹಣ ಕೂಡ ಉಳಿಸಬಹುದು. ಅದು ಹೇಗೆ ಅನ್ನೋದನ್ನು ನಾವು ನಿಮಗೆ ಹೇಳ್ತೀವಿ..ಬನ್ನಿ ನೋಡೋಣ..
1. ಮೊದಲು ನೀವು ಮಾಡಬೇಕಾಗಿರುವುದು ಏನೆಂದರೆ ಮುಖವನ್ನು ಶುಚಿಗೊಳಿಸುವುದು. ನೀರು ಹಾಗೂ ಎಣ್ಣೆ ಆಧಾರಿತ ಕ್ಲೆನ್ಸರ್ ಗಳ ಮೂಲಕ ನಿಮ್ಮ ಮುಖವನ್ನು ಶುಚಿಗೊಳಿಸಿ.
2. ಆಲಿವ್ ಎಣ್ಣೆಯನ್ನು ಸವರಿ ಮುಖವನ್ನು ಮೃದುವಾಗಿ ಉಜ್ಜಿ ಸ್ವಲ್ಪ ಸಮಯದ ನಂತರ ಶುದ್ಧ ನೀರಿನಲ್ಲಿ ತೊಳೆಯಿರಿ.
3. ನಂತರ ಸ್ಟೀಮರ್ ತೆಗೆದುಕೊಳ್ಳಿ. ಬೆಚ್ಚಗಿನ ನೀರಿಗೆ 2 ರಿಂದ 3 ತುಳಸಿ ಎಲೆಗಳನ್ನು ಹಾಕಿ ಸ್ಟೀಮ್ ತೆಗೆದುಕೊಂಡರೆ ಉತ್ತಮ.
4. ಎಕ್ಸ್ಟ್ರಾಕ್ಟರ್ ಟೂಲ್ ಉಪಯೋಗಿಸಿ ನಿಮ್ಮ ಚರ್ಮದಿಂದ ಬಿಳಿ ಮತ್ತು ಕಪ್ಪು ಕಲೆಗಳನ್ನು ತೆಗೆದುಹಾಕಿ.
5. ಒಂದು ಶೀಟ್ ಕ್ರೀಮ್ ಅಥವಾ ಅಲೋವೆರಾ ಜೆಲ್ ತೆಗೆದುಕೊಂಡು ಅದನ್ನು ನಿಮ್ಮ ಮುಖದ ಮೇಲೆ ಸುಮಾರು 10 ರಿಂದ 15 ನಿಮಿಷಗಳ ಕಾಲ ಹಚ್ಚಿ ನಂತರ ತಣ್ಣೀರಿನಿಂದ ತೊಳೆಯಿರಿ.
6. ಈಗ, ಮಸಾಜ್ ಕ್ರೀಮ್ ತೆಗೆದುಕೊಂಡು ಅದರೊಂದಿಗೆ ನಿಮ್ಮ ಮುಖವನ್ನು ನಿಧಾನವಾಗಿ ಮಸಾಜ್ ಮಾಡಿ. ವೃತ್ತಾಕಾರವಾಗಿ ಮೃದುವಾಗಿ ಮಸಾಜ್ ಮಾಡಿ.
7. ಕೊನೆಯಲ್ಲಿ ನಿಮ್ಮ ಆಯ್ಕೆಯ ಫೇಸ್ ಪ್ಯಾಕ್ ಬಳಸಿ.
ಮುಖ್ಯ ಸಲಹೆಗಳು:
– ಮುಖದ ವ್ಯಾಕ್ಸಿಂಗ್ ಅನ್ನು ಸ್ವತಃ ನೀವೇ ಮನೆಯಲ್ಲಿ ಮಾಡಲು ಹೋಗಬೇಡಿ. ಏಕೆಂದರೆ ಅದು ನಿಮ್ಮ ಮುಖಕ್ಕೆ ಸುಟ್ಟಗಾಯಗಳನ್ನು ಉಂಟು ಮಾಡಬಹುದು.
– ಮುಖಕ್ಕೆ ಫೇಸ್ ಪ್ಯಾಕ್ ಹಾಕುವ ಮೊದಲು ಕೈಗಳನ್ನು ಸ್ವಚ್ಛವಾಗಿರಿಸಿ. ಹಾಗೂ ಉಪಯೋಗಿಸುವ ಉಪಕರಣಗಳನ್ನು ಕೂಡ ಸ್ವಚ್ಛಗೊಳಿಸಿ ನಂತರ ಉಪಯೋಗಿಸಿ.
– ನಿಮ್ಮ ಮುಖವನ್ನು ಸ್ವಚ್ಛಗೊಳಿಸುವಾಗ ಶುದ್ಧವಾದ ನೀರನ್ನೇ ಬಳಸಿ.
– ಎಲ್ಲಾ ಸಮಯದಲ್ಲೂ ನಿಮ್ಮ ಜೊತೆ ಒದ್ದೆಯಿರದ ಟವೆಲ್ ಇಟ್ಟುಕೊಳ್ಳಿ.