
ಹಿಂದೂ ಕ್ಯಾಲೆಂಡರ್ ಪ್ರಕಾರ ಅಕ್ಷಯ ತೃತೀಯವನ್ನು ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯಾ ತಿಥಿಯಂದು ಆಚರಿಸಲಾಗುತ್ತದೆ. ಅಕ್ಷಯ ತೃತೀಯವನ್ನು ಹಿಂದೂ ಧರ್ಮದಲ್ಲಿ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಈ ದಿನ ದಾನ, ಪೂಜೆ, ಜಪ ಮತ್ತು ತಪಸ್ಸು ಮಾಡುವುದು ಅತ್ಯಂತ ಮಂಗಳಕರ. ಈ ದಿನ ಲಕ್ಷ್ಮಿದೇವಿಯನ್ನು ಪೂಜಿಸಬೇಕು. ಈ ವರ್ಷ ಅಕ್ಷಯ ತೃತೀಯ ಹಬ್ಬವನ್ನು ಮೇ 10 ರಂದು ಆಚರಿಸಲಾಗುತ್ತದೆ. ಈ ದಿನದಂದು ಕೆಲವೊಂದು ತಪ್ಪುಗಳನ್ನು ಮಾಡಬಾರದು.
ಮಾಂಸ, ಮದ್ಯ ಸೇವಿಸಬೇಡಿ
ಅಕ್ಷಯ ತೃತೀಯದಂದು ಮಸಾಲೆಯುಕ್ತ ಆಹಾರವನ್ನು ಸೇವಿಸಬಾರದು. ಮಾಂಸ ಮತ್ತು ಮದ್ಯ ಸೇವಿಸುವುದನ್ನು ಕೂಡ ನಿಷೇಧಿಸಲಾಗಿದೆ. ಇದು ಅಶುಭ ಪರಿಣಾಮಗಳಿಗೆ ಕಾರಣವಾಗಬಹುದು. ಅಕ್ಷಯ ತೃತೀಯದಂದು ಸಾತ್ವಿಕ ಆಹಾರವನ್ನು ಮಾತ್ರ ಸೇವಿಸಬೇಕು. ಇದು ಮಾನಸಿಕ ಶಾಂತಿಯನ್ನು ಪಡೆಯಲು ಸಹಾಯ ಮಾಡುತ್ತದೆ.
ಕೊಳಕು ಹರಡಬೇಡಿ
ಅಕ್ಷಯ ತೃತೀಯದ ದಿನ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಯನ್ನು ಪೂಜಿಸುವ ಸಂಪ್ರದಾಯವಿದೆ. ಎಲ್ಲಿ ಶುಚಿತ್ವವಿರುತ್ತದೆಯೋ ಅಲ್ಲಿ ತಾಯಿ ಲಕ್ಷ್ಮಿ ನೆಲೆಸುತ್ತಾಳೆ ಎಂಬ ನಂಬಿಕೆ ಇದೆ. ಈ ಕಾರಣಕ್ಕಾಗಿ ಅಕ್ಷಯ ತೃತೀಯ ದಿನದಂದು ಮನೆಯ ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸಿ ಮತ್ತು ಕಸ ಹಾಕಬೇಡಿ.
ತುಳಸಿ ಎಲೆಗಳನ್ನು ಕೀಳಬೇಡಿ
ತುಳಸಿ ಗಿಡವನ್ನು ಹಿಂದೂ ಧರ್ಮದಲ್ಲಿ ಪೂಜಿಸಲಾಗುತ್ತದೆ. ಈ ದಿನದಂದು ಭಗವಾನ್ ವಿಷ್ಣುವನ್ನು ಪೂಜಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಕಾರಣಕ್ಕಾಗಿ ಅಕ್ಷಯ ತೃತೀಯದಂದು ತುಳಸಿ ಎಲೆಗಳನ್ನು ಕೀಳಬಾರದು. ಈ ದಿನ ತುಳಸಿಯನ್ನು ಪೂಜಿಸಬಹುದು ಮತ್ತು ಸಂಜೆ ತುಪ್ಪದ ದೀಪವನ್ನು ಹಚ್ಚಬಹುದು.
ಅಷ್ಟೇ ಅಲ್ಲ ಅಕ್ಷಯ ತೃತೀಯದ ದಿನ ಜೂಜು, ಕಳ್ಳತನ, ದರೋಡೆ, ಜೂಜಾಟ, ಸುಳ್ಳು ಹೇಳುವುದು ಮುಂತಾದ ಯಾವುದೇ ದುಷ್ಕೃತ್ಯಗಳಲ್ಲಿ ತೊಡಗಬಾರದು. ಇದರಿಂದ ತಾಯಿ ಲಕ್ಷ್ಮಿ ಕೋಪಗೊಳ್ಳುತ್ತಾಳೆ.
ಸಾಲ ಮಾಡಬೇಡಿ
ಅಕ್ಷಯ ತೃತೀಯ ದಿನದಂದು ಯಾರಿಗೂ ಸಾಲ ಕೊಡಬಾರದು. ಇದರಿಂದ ಮನೆಯಲ್ಲಿ ಬಡತನ ಬರಬಹುದು.