ದಪ್ಪಗಿರುವವರಿಗೆಲ್ಲ ಸಣ್ಣಗೆ ಬಳುಕುವ ಬಳ್ಳಿಯಂತಾಗಬೇಕು ಅನ್ನೋ ಆಸೆ. ಅದಕ್ಕಾಗಿ ಸಾಕಷ್ಟು ಕಸರತ್ತು ಮಾಡ್ತಾರೆ. ಡಯಟ್, ವ್ಯಾಯಾಮ ಹೀಗೆ ತೂಕ ಇಳಿಸಲು ಹತ್ತಾರು ರೀತಿಯಲ್ಲಿ ಪ್ರಯತ್ನಿಸ್ತಾರೆ. ಅತ್ಯಂತ ಶೀಘ್ರವಾಗಿ ಸಣ್ಣಗಾಗಬೇಕು ಅನ್ನೋ ಅವಸರದಲ್ಲಿ ಕೆಲವರು ಊಟವನ್ನೇ ಕಡಿಮೆ ಮಾಡಿಬಿಡ್ತಾರೆ. ಊಟ ಬಿಟ್ರೆ ತೆಳ್ಳಗಾಗ್ತೀನಿ ಅನ್ನೋ ಭ್ರಮೆ ಹಲವರಲ್ಲಿದೆ.
ಆದ್ರೆ ಈ ರೀತಿ ಮಾಡೋದ್ರಿಂದ ಯಾವುದೇ ಪ್ರಯೋಜನವಿಲ್ಲ. ಸಣ್ಣಗಾಗ್ಬೇಕು ಅಂದ್ರೆ ಸರಿಯಾದ ಡಯಟ್ ಫಾಲೋ ಮಾಡಬೇಕು. ಒಳ್ಳೆಯ ಪೋಷಕಾಂಶವಿರುವ ಆಹಾರವನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಿದ್ರೆ ನಿಮ್ಮ ಪ್ರಯತ್ನ ಫಲಿಸಿದಂತೆಯೇ ಲೆಕ್ಕ. ಇದರ ಜೊತೆಜೊತೆಗೆ ಫಿಟ್ ಆಗಿರಲು ವ್ಯಾಯಾಮ ಮಾಡಲು ಮರೆಯಬೇಡಿ.
ತೂಕ ಕಡಿಮೆ ಮಾಡಬೇಕೆಂದು ಒಂದೇ ಸಲಕ್ಕೆ ನೀವು ಊಟ ಬಿಟ್ಟರೆ ಅಥವಾ ತೀರಾ ಕಡಿಮೆ ತಿಂದ್ರೆ ವೀಕ್ನೆಸ್ ಶುರುವಾಗಬಹುದು. ಜೊತೆಗೆ ಅನಾರೋಗ್ಯ ಕೂಡ ಕಾಡುವ ಆತಂಕವಿರುತ್ತದೆ. ಹಾಗಾಗಿ ಊಟ ಮಾಡುವುದನ್ನೇ ನಿಲ್ಲಿಸದೆ, ತೂಕ ನಿಯಂತ್ರಿಸುವಂತಹ ಭರಪೂರ ಪೋಷಕಾಂಶವಿರುವ ತಿನಿಸುಗಳು, ಹಣ್ಣು, ತರಕಾರಿ ಸೇವಿಸಿ. ಸಹಜವಾಗಿಯೇ ತೂಕ ಕಡಿಮೆಯಾಗುತ್ತದೆ.