
ದೇಹವನ್ನು ಫಿಟ್ ಆಗಿಟ್ಟುಕೊಳ್ಳಲು ಅನೇಕರು ಜಿಮ್‌ನಲ್ಲಿ ಕಸರತ್ತು ಮಾಡ್ತಾರೆ. ಬೇರೆ ಬೇರೆ ವ್ಯಾಯಾಮದ ಜೊತೆಗೆ ಟ್ರೆಡ್‌ಮಿಲ್‌ನಲ್ಲಿ ವಾಕಿಂಗ್ ಮತ್ತು ರನ್ನಿಂಗ್ ಕೂಡ ಸಾಮಾನ್ಯ. ಟ್ರೆಡ್‌ಮಿಲ್‌ನಲ್ಲಿ ಓಡುವಾಗ, ಅಥವಾ ನಡೆಯುವಾಗ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಟ್ರೆಡ್‌ಮಿಲ್‌ನಲ್ಲಿ ವ್ಯಾಯಾಮ ಮಾಡುವ ಸಂದರ್ಭದಲ್ಲಿ ಶಾರ್ಟ್ ಸಕ್ರ್ಯೂಟ್ ಹಾಗೂ ಮತ್ತಿತರ ಕಾರಣಗಳಿಂದ ಅನಾಹುತವಾಗುವ ಸಾಧ್ಯತೆಗಳಿರುತ್ತವೆ.
ಟ್ರೆಡ್ ಮಿಲ್ ಬಳಸುವಾಗ ವೇಗದ ಬಗ್ಗೆ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಿ. ಏಕೆಂದರೆ ನೆಲದ ಮೇಲೆ ಓಡುವುದಕ್ಕಿಂದ ಟ್ರೆಡ್‌ಮಿಲ್‌ನಲ್ಲಿ ಸಂಪೂರ್ಣ ವಿಭಿನ್ನವಾಗಿರುತ್ತದೆ. ಟ್ರೆಡ್‌ಮಿಲ್‌ನಲ್ಲಿ ಓಡುವುದು ಅಭ್ಯಾಸವಾದ ಬಳಿಕ ಕ್ರಮೇಣ ವೇಗವನ್ನು ಹೆಚ್ಚಿಸಿ.
ಟ್ರೆಡ್‌ಮಿಲ್‌ನಲ್ಲಿ ಓಡುವಾಗ ಹೃದಯ ಬಡಿತ ಹೆಚ್ಚಾಗುತ್ತದೆ. ಇದು ತೀವ್ರವಾದರೆ ತಕ್ಷಣವೇ ವ್ಯಾಯಾಮವನ್ನು ನಿಲ್ಲಿಸಿ. ಏಕೆಂದರೆ ಹೃದಯ ಬಡಿತ ವಿಪರೀತ ಹೆಚ್ಚಾದರೆ ಪಾರ್ಶ್ವವಾಯು ಅಥವಾ ಹೃದಯಾಘಾತವಾಗುವ ಅಪಾಯವಿರುತ್ತದೆ. ಆದ್ದರಿಂದ ಅಸ್ವಸ್ಥತೆ ಅಥವಾ ಆಯಾಸವೆನಿಸಿದಲ್ಲಿ ತಕ್ಷಣ ವಾಕಿಂಗ್ ಅಥವಾ ರನ್ನಿಂಗ್ ಅನ್ನು ನಿಲ್ಲಿಸಿ.
ಟ್ರೆಡ್‌ಮಿಲ್‌ನಲ್ಲಿ ಓಡುವವರು ಪ್ರೋಟೀನ್ ಹೊಂದಿರುವ ಸ್ಟೀರಾಯ್ಡ್‌ಗಳನ್ನು ತೆಗೆದುಕೊಳ್ಳಬಾರದು. ಇದು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಅಂತಹ ವಸ್ತುಗಳಿಂದ ದೂರವಿರಬೇಕು.
ಈಗಾಗಲೇ ಬೆನ್ನುನೋವಿನ ಸಮಸ್ಯೆ ಇರುವವರು ಟ್ರೆಡ್‌ಮಿಲ್ ಬಳಸದೇ ಇರುವುದು ಉತ್ತಮ. ಏಕೆಂದರೆ ಟ್ರೆಡ್‌ಮಿಲ್‌ನಲ್ಲಿ ವಾಕ್ ಮಾಡುವುದರಿಂದ ಸಮಸ್ಯೆ ಇನ್ನಷ್ಟು ಹೆಚ್ಚಾಗಬಹುದು.