ಪ್ರತಿ ಋತುವಿನಲ್ಲೂ ಸೇಬು ಹಣ್ಣುಗಳು ದೊರೆಯುತ್ತವೆ. ಆದರೆ ಚಳಿಗಾಲದಲ್ಲಿ ಉತ್ತಮವಾದ ತಳಿಯ ಸೇಬುಗಳನ್ನು ಸವಿಯಬಹುದು. ಸೇಬು ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದರಲ್ಲಿ ಫೈಬರ್, ಪೊಟ್ಯಾಸಿಯಮ್, ಮೆಗ್ನೀಸಿಯಮ್, ರಂಜಕ, ವಿಟಮಿನ್ ಸಿ, ಬಿ 6, ವಿಟಮಿನ್ ಇ, ವಿಟಮಿನ್ ಕೆ, ಪ್ರೋಟೀನ್, ಕಾರ್ಬೋಹೈಡ್ರೇಟ್ಗಳು ಮತ್ತು ಉತ್ಕರ್ಷಣ ನಿರೋಧಕಗಳು ಕಂಡುಬರುತ್ತವೆ.
ಸೇಬು ಅಸಿಡಿಕ್ ಅಂಶಗಳನ್ನು ಹೊಂದಿದೆ. ಇದರಲ್ಲಿ pH ಮಟ್ಟವು 3 ರಿಂದ 3.5ವರೆಗೆ ಇರಬಹುದು. ಆದರೆ ಪ್ರತಿ ಆಹಾರದೊಂದಿಗೆ ಸೇಬುಗಳನ್ನು ತಿನ್ನಲು ಸಾಧ್ಯವಿಲ್ಲ.
ಆಹಾರ ತಜ್ಞರ ಪ್ರಕಾರ ಸೇಬುಗಳನ್ನು ತಿನ್ನುವಾಗ ನಾವು ಕೆಲವು ತಪ್ಪುಗಳನ್ನು ಮಾಡುತ್ತೇವೆ. ಅವುಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ. ಗ್ಯಾಸ್ ಮತ್ತು ಅಜೀರ್ಣ ಇರುವವರು ಅಂದರೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಇದ್ದರೆ ಖಾಲಿ ಹೊಟ್ಟೆಯಲ್ಲಿ ಸೇಬು ತಿನ್ನುವುದನ್ನು ತಪ್ಪಿಸಬೇಕು. ಊಟವಾಗಿ 2 ಗಂಟೆಗಳ ಬಳಿಕ ಆಪಲ್ ತಿನ್ನಬಹುದು.
ಕೆಲವರು ಡೈರಿ ಉತ್ಪನ್ನಗಳೊಂದಿಗೆ ಸೇಬುಗಳನ್ನು ತಿನ್ನುತ್ತಾರೆ. ಹಾಲು, ಮೊಸರು, ಚೀಸ್, ಬೆಣ್ಣೆಯೊಂದಿಗೆ ಬೆರೆಸಿಕೊಂಡು ತಿನ್ನಬಾರದು. ಸೇಬಿನಲ್ಲಿ ಸಿಟ್ರಿಕ್ ಆಮ್ಲವಿರುವುದರಿಂದ ಹಾಲಿನ ಉತ್ಪನ್ನಗಳೊಂದಿಗೆ ಇದು ಪ್ರತಿಕ್ರಿಯಿಸಬಹುದು. ಇದರಿಂದಾಗಿ ಅದನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗಬಹುದು. ಮಾರುಕಟ್ಟೆಯಲ್ಲಿ ಸಿಗುವ ಆಪಲ್ ಶೇಕ್‌ಗಳನ್ನು ಹಾಲು ಬೆರೆಸಿ ತಯಾರಿಸುವುದರಿಂದ ಅದನ್ನೂ ಕುಡಿಯಬಾರದು.
ಇದು ಕರುಳಿನ ಮೇಲೂ ಪರಿಣಾಮ ಬೀರುತ್ತದೆ. ಹಾಲಿನೊಂದಿಗೆ ಸೇಬನ್ನು ತಿನ್ನುವುದರಿಂದ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳ ಪರಿಣಾಮವನ್ನು ಸಹ ಹೆಚ್ಚಿಸಬಹುದು. ಚರ್ಮದ ಅಸ್ವಸ್ಥತೆಗಳು, ಸೋರಿಯಾಸಿಸ್, ಎಸ್ಜಿಮಾ ಇತ್ಯಾದಿ ಉಲ್ಬಣಿಸುವ ಸಾಧ್ಯತೆ ಇರುತ್ತದೆ.
ಸೇಬು, ಬಾಳೆಹಣ್ಣು, ಆಲೂಗೆಡ್ಡೆ, ಪೇರಳೆಯಲ್ಲಿ ಪಾಲಿಫಿನಾಲ್ ಆಕ್ಸಿಡೇಸ್ ಕಿಣ್ವಗಳು ಇರುತ್ತವೆ. ಕತ್ತರಿಸಿದ ನಂತರ ಅದರ ಕಿಣ್ವಗಳು ಗಾಳಿಯೊಂದಿಗೆ ಸಂಪರ್ಕಕ್ಕೆ ಬಂದಾಗ, ಅವು ಕಬ್ಬಿಣ-ಸಮೃದ್ಧ ಫೀನಾಲ್ನೊಂದಿಗೆ ಪ್ರತಿಕ್ರಿಯಿಸುತ್ತವೆ. ಈ ಕಾರಣದಿಂದಾಗಿ ತುಂಡರಿಸಿದ ಸೇಬು ಹಳದಿ ಮತ್ತು ಕಪ್ಪು ಬಣ್ಣಕ್ಕೆ ತಿರುಗುತ್ತದೆ.