alex Certify ವಿಪರೀತ ʼಮೈಗ್ರೇನ್‌ʼ ಇದ್ದಾಗ ಈ ತಪ್ಪುಗಳನ್ನು ಮಾಡಲೇಬೇಡಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಪರೀತ ʼಮೈಗ್ರೇನ್‌ʼ ಇದ್ದಾಗ ಈ ತಪ್ಪುಗಳನ್ನು ಮಾಡಲೇಬೇಡಿ…!

ಮೈಗ್ರೇನ್ ಎಂದರೆ ಅಸಹನೀಯ ತಲೆನೋವು. ಇದು ಕೆಲವೊಮ್ಮೆ ಅರ್ಧ ಅಥವಾ ಇಡೀ ತಲೆಯಲ್ಲಿ ಸಂಭವಿಸಬಹುದು. ಮೈಗ್ರೇನ್‌ಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆಯದಿದ್ದರೆ ಸಮಸ್ಯೆ ಗಂಭೀರವಾಗಬಹುದು. ಜೀವನಶೈಲಿ, ಒತ್ತಡ ಅಥವಾ ಹವಾಮಾನದಲ್ಲಿನ ಬದಲಾವಣೆಗಳಿಂದ ಕೂಡ ಮೈಗ್ರೇನ್‌ ಉಂಟಾಗುತ್ತದೆ.

ಮೈಗ್ರೇನ್‌ ಲಕ್ಷಣ

ಮೈಗ್ರೇನ್ ಬರುವ ಮೊದಲು ಕೆಲವು ಚಿಹ್ನೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಇದನ್ನು ಪ್ರೋಡ್ರೋಮ್ ಎಂದು ಕರೆಯಲಾಗುತ್ತದೆ. ಇದನ್ನು ಪೂರ್ವ-ತಲೆನೋವು ಎಂದೂ ಕರೆಯುತ್ತಾರೆ. ಪ್ರೋಡ್ರೋಮ್ ಸಮಯದಲ್ಲಿ ಸೌಮ್ಯವಾದ ತಲೆನೋವಿನೊಂದಿಗೆ ಇನ್ನೂ ಕೆಲವು ಲಕ್ಷಣಗಳಿರುತ್ತವೆ. ಈ ಅವಧಿಯಲ್ಲಿ ವಿಪರೀತ ಆಕಳಿಕೆ, ಅತಿಯಾದ ಮೂತ್ರ ವಿಸರ್ಜನೆ ಜೊತೆಗೆ ಸಿಹಿ ತಿನ್ನುವ ಆಸೆಯಿರುತ್ತದೆ. ಈ ರೀತಿಯಾದಾಗ ಅದು ಮೈಗ್ರೇನ್‌ನ ಆರಂಭಿಕ ಹಂತ ಎಂಬುದನ್ನು ಅರ್ಥಮಾಡಿಕೊಳ್ಳಿ.

ಬದಲಾದ ನಡವಳಿಕೆ

ಕೆಲವರು ಮೈಗ್ರೇನ್‌ಗೆ ಕೆಲವು ಗಂಟೆಗಳ ಮೊದಲು ಕಿರಿಕಿರಿಯನ್ನು ಅನುಭವಿಸಲು ಪ್ರಾರಂಭಿಸುತ್ತಾರೆ. ಅವರು ದುಃಖಿತರಾಗುತ್ತಾರೆ. ಅನೇಕ ಬಾರಿ ಅವರ ಉತ್ಸಾಹವು ಕಣ್ಮರೆಯಾಗುತ್ತದೆ. ಈ ರೋಗಲಕ್ಷಣಗಳು ಕಾಣಿಸಿಕೊಂಡು ಸ್ವಲ್ಪ ಸಮಯದ ನಂತರ ಮೈಗ್ರೇನ್ ಶುರುವಾಗುತ್ತದೆ.

ನಿದ್ರೆಯ ಮಾದರಿ ಬದಲಾವಣೆ

ಮೈಗ್ರೇನ್‌ಗೂ ಮೊದಲು ಆಯಾಸ ಕಾಣಿಸಿಕೊಳ್ಳುತ್ತದೆ. ಅವರ ನಿದ್ರೆಯ ಮಾದರಿಗಳು ಸಹ ಬದಲಾಗುತ್ತವೆ. ಒಂದೋ ಅವರು ಹೆಚ್ಚು ನಿದ್ದೆ ಮಾಡಲು ಪ್ರಾರಂಭಿಸುತ್ತಾರೆ ಅಥವಾ ನಿದ್ರಿಸುವುದಿಲ್ಲ. ನಿದ್ರೆಯಲ್ಲಿನ ಇಂತಹ ಬದಲಾವಣೆಗಳು ಮೈಗ್ರೇನ್ ಅನ್ನು ಪ್ರಚೋದಿಸುತ್ತವೆ. ಕೆಲವೊಮ್ಮೆ ಪ್ರಕಾಶಮಾನವಾದ ಬೆಳಕು ಮತ್ತು ಜೋರಾದ ಶಬ್ಧ ಕೂಡ ಮೈಗ್ರೇನ್ ಅನ್ನು ಪ್ರಚೋದಿಸಬಹುದು.

ಹೊಟ್ಟೆಯ ಸಮಸ್ಯೆ

ಕೆಲವೊಮ್ಮೆ ಮೈಗ್ರೇನ್‌ ಜೀರ್ಣಕ್ರಿಯೆಯ ಮೇಲೂ ಪರಿಣಾಮ ಬೀರುತ್ತದೆ. ಮಲಬದ್ಧತೆ ಅಥವಾ ಅತಿಸಾರದಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಇದು ಕೂಡ ತಲೆನೋವಿಗೆ ಕಾರಣವಾಗಬಹುದು.

ಮೈಗ್ರೇನ್ಗೆ ಪರಿಹಾರ…

ಕೆಫೀನ್ ಸೇವನೆಯನ್ನು ಆದಷ್ಟು ಕಡಿಮೆ ಮಾಡಿ. ಮೈಗ್ರೇನ್ ಸಂದರ್ಭದಲ್ಲಿ ಸ್ವಲ್ಪ ಕೆಫೀನ್ ಅನ್ನು ಬಳಸಬಹುದು.

ಧ್ಯಾನ, ಮೈಗ್ರೇನ್‌ನಿಂದ ಉಪಶಮನ ನೀಡುತ್ತದೆ. ಇದು ಮನಸ್ಸು ಮತ್ತು ದೇಹದ ಸ್ನಾಯುಗಳಿಗೆ ವಿಶ್ರಾಂತಿ ನೀಡುತ್ತದೆ. ಪ್ರತಿದಿನ ಕನಿಷ್ಠ 10 ನಿಮಿಷಗಳ ಕಾಲ ಧ್ಯಾನ ಮಾಡಬೇಕು.

ಕೆಲವು ಆಹಾರಗಳು ಮೈಗ್ರೇನ್ ಅನ್ನು ಹೆಚ್ಚಿಸಬಹುದು. ಹಳೆಯ ಚೀಸ್, ಕೆಲವು ಹಣ್ಣುಗಳು, ನಟ್ಸ್‌, ಆಲ್ಕೋಹಾಲ್, ಮಸಾಲೆಯುಕ್ತ ವಸ್ತುಗಳು ಮತ್ತು ಸಂಸ್ಕರಿಸಿದ ಆಹಾರವನ್ನು ಸೇವಿಸಬೇಡಿ.

ಮೈಗ್ರೇನ್ ತಪ್ಪಿಸಲು ನಿದ್ರೆಯನ್ನು ಸುಧಾರಿಸಿಕೊಳ್ಳಿ. ಶಾಂತ ಮತ್ತು ಮಂದ ಬೆಳಕಿನಲ್ಲಿ ಮಾತ್ರ ಮಲಗಿಕೊಳ್ಳಿ.

ಮಲಗುವ ಸಮಯದಲ್ಲಿ ಮೊಬೈಲ್‌ ನೋಡಬಾರದು. ಅರ್ಧಗಂಟೆ ಮೊದಲು ಮೊಬೈಲ್ ಫೋನ್ ಅಥವಾ ಟಿವಿ ಸ್ಕ್ರೀನ್‌ನಿಂದ ದೂರವಿರಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...