ಈಗಿನ ಒತ್ತಡದ ಜೀವನದಲ್ಲಿ ಕೂದಲು ಉದುರುವಿಕೆ ಸಮಸ್ಯೆ ಹತ್ತರಲ್ಲಿ ಆರು ಮಂದಿ ಕಾಡುತ್ತೆ. ಅತಿಯಾದ ಕೂದಲು ಉದುರುವಿಕೆಯಿಂದ ನಿಮ್ಮ ಕೂದಲು ದುರ್ಬಲವಾಗಿಬಿಡುತ್ತೆ. ಯುವತಿಯರಿಗಂತೂ ಅವರ ಸೌಂದರ್ಯವನ್ನ ಇನ್ನಷ್ಟು ಹೆಚ್ಚಿಸೋಕೆ ಕೂದಲಿನ ಸಹಾಯ ಬೇಕೇ ಬೇಕು. ಹೀಗಾಗಿ ಕೂದಲಿನ ಮೇಲೆ ಯುವತಿಯರು ಇನ್ನಿಲ್ಲದ ಪ್ರಯೋಗ ಮಾಡ್ತಾನೇ ಇರ್ತಾರೆ.
ಆದರೆ ನಮ್ಮ ವಿವಿಧ ಪ್ರಯೋಗಗಳಿಂದಾಗಿ ಕೂದಲಿನ ಆರೋಗ್ಯ ಹಾಳಾಗಿಬಿಡಬಹುದು. ನಿಮ್ಮ ಕೂದಲು ತುಂಬಾನೇ ದುರ್ಬಲವಾಗಿದ್ದರೆ ನೀವು ಈ ಕೆಳಗಿನ ಅಂಶಗಳನ್ನ ಗಮನದಲ್ಲಿ ಇಡೋದು ತುಂಬಾನೇ ಮುಖ್ಯ.
ಕೆಲವೊಂದು ಯುವತಿಯರು ತಮ್ಮ ಕೂದಲು ರೇಷ್ಮೆಯಂತೆ ಹೊಳೆಯಬೇಕು ಅಂತಾ ನಿತ್ಯ ಶಾಂಪೂ ಹಾಕಿ ತಲೆಸ್ನಾನ ಮಾಡ್ತಾರೆ. ಆದರೆ ಕೂದಲಿಗೆ ಅತಿಯಾದ ಶಾಂಪೂವನ್ನ ಹಾಕೋದು ಕೂಡ ಒಳ್ಳೆಯದಲ್ಲ. ಇದರಿಂದ ನಿಮ್ಮ ಕೂದಲು ಇನ್ನಷ್ಟು ದುರ್ಬಲವಾಗಲಿದೆ. ವಾರದಲ್ಲಿ 2 ಬಾರಿ ಮಾತ್ರ ತಲೆಸ್ನಾನ ಮಾಡುವಾಗ ಶಾಂಪೂ ಬಳಕೆ ಮಾಡಿ.
ಗಡಿಬಿಡಿಯಲ್ಲಿದ್ದಾಗ ಬಹುತೇಕ ಮಹಿಳೆಯರು ಒದ್ದೆ ಕೂದಲನ್ನೇ ಬಾಚಿಕೊಳ್ತಾರೆ. ಇದರಿಂದ ಕೂದಲು ಹೆಚ್ಚೆಚ್ಚು ಉದುರುತ್ತೆ. ಹೀಗಾಗಿ ಕೂದಲೂ ಸರಿಯಾಗಿ ಒಣಗಿದ ಬಳಿಕವೇ ತಲೆಗೆ ಹಣಿಗೆ ತಾಗಿಸಿ.
ಎಲ್ಲರಿಗೂ ಈಗ ಸ್ಟೈಲ್ ಆಗಿ ಕಾಣಬೇಕು ಎಂಬ ಆಸೆ. ಹೀಗಾಗಿ ಯುವತಿಯರು ಕೂದಲನ್ನ ಸ್ಟ್ರೇಟ್ ಮಾಡಿಕೊಳ್ಳೋದು ಹಾಗೂ ಕರ್ಲ್ ಮಾಡಿಕೊಳ್ಳುವ ಮಷಿನ್ ಬಳಕೆ ಮಾಡ್ತಾರೆ. ಇದರಿಂದ ಕೂದಲು ಸಂಪೂರ್ಣವಾಗಿ ಹಾಳಾಗಿಬಿಡುತ್ತೆ. ಆದ್ದರಿಂದ ಇಂತಹ ಮಷಿನ್ಗಳ ಬಳಕೆಯನ್ನ ಆದಷ್ಟು ಕಡಿಮೆ ಮಾಡಿ.
ಅನೇಕ ಯುವತಿಯರು ಶಾಂಪೂವಿನಿಂದ ತಲೆಯನ್ನ ತೊಳೆದುಕೊಂಡ ಬಳಿಕ ಕಂಡಿಷನರ್ ಬಳಕೆ ಮಾಡೋದೇ ಇಲ್ಲ. ಆದರೆ ಕಂಡಿಷನರ್ ನಿಮ್ಮ ಕೂದಲನ್ನ ಮಾಯಿಶ್ಚರೈಸ್ ಮಾಡುವ ಕೆಲಸವನ್ನ ಮಾಡುತ್ತವೆ. ಹೀಗಾಗಿ ನೀವು ಕಂಡಿಷನರ್ ಬಳಕೆ ಮಾಡದೇ ಇದ್ದಲ್ಲಿ ಕೂದಲು ಶುಷ್ಕವಾಗಿ ಕಾಣುತ್ತೆ. ಆದ್ದರಿಂದ ಕಂಡಿಷನರ್ನ್ನು ಬಳಕೆ ಮಾಡುವ ಅಭ್ಯಾಸ ರೂಢಿಸಿಕೊಳ್ಳಿ.