alex Certify ತಲೆನೋವು ಬಂದಾಗಲೆಲ್ಲ ಚಹಾ ಕುಡಿಯುವ ತಪ್ಪು ಮಾಡಬೇಡಿ; ಈ ಮಸಾಲೆಯಲ್ಲಿದೆ ಮದ್ದು……! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಲೆನೋವು ಬಂದಾಗಲೆಲ್ಲ ಚಹಾ ಕುಡಿಯುವ ತಪ್ಪು ಮಾಡಬೇಡಿ; ಈ ಮಸಾಲೆಯಲ್ಲಿದೆ ಮದ್ದು……!

ಭಾರತದಲ್ಲಿ ಚಹಾಕ್ಕಾಗಿ ಹಂಬಲಿಸುವವರಿಗೆ ಲೆಕ್ಕವೇ ಇಲ್ಲ. ಚಹಾ ನೆನಪಾದ ತಕ್ಷಣ ಕುಡಿಯಬೇಕೆಂಬ ಕಡುಬಯಕೆ ಅದೆಷ್ಟೋ ಜನರಲ್ಲಿದೆ. ಅನೇಕರಿಗೆ ಇದು ಅಗತ್ಯಕ್ಕಿಂತ ಹೆಚ್ಚಾಗಿ ವ್ಯಸನವಾಗಿದೆ. ತಜ್ಞರ ಪ್ರಕಾರ ಮಿತವಾದ ಹಾಲು ಮತ್ತು ಸಕ್ಕರೆ ಬೆರೆಸಿ ದಿನಕ್ಕೆ ಗರಿಷ್ಠ 2 ಬಾರಿ ಚಹಾ ಕುಡಿಯಬಹುದು. ಅನೇಕರು ತಲೆನೋವಿಗೆ ಚಹಾ ಉತ್ತಮ ಪರಿಹಾರವೆಂದು ಭಾವಿಸಿದ್ದಾರೆ. ತಲೆನೋವು ಕಾಣಿಸಿಕೊಂಡ ತಕ್ಷಣ ಚಹಾ ಕುಡಿಯುತ್ತಾರೆ.

ಆದರೆ ತಜ್ಞರ ಪ್ರಕಾರ ಈ ರೀತಿ ಮಾಡುವುದು ಸೂಕ್ತವಲ್ಲ. ತಲೆನೋವು ಬಂದಾಗ ಚಹಾದ ಬದಲು ಒಂದು ಮಸಾಲೆಯನ್ನು ಬಳಸಬೇಕು. 6 ರಿಂದ 7 ಕಾಳುಮೆಣಸನ್ನು ಒಂದು ಗಂಟೆ ನೀರಿನಲ್ಲಿ ನೆನೆಸಿ ನಂತರ ಅದನ್ನು ನುಂಗಬೇಕು. ಕಾಳುಮೆಣಸಿನಲ್ಲಿರುವ ಪೈಪರಿನ್ ನಮ್ಮ ನರಕೋಶಗಳನ್ನು ರಿಲ್ಯಾಕ್ಸ್‌ ಮಾಡುತ್ತದೆ. ಇದರಿಂದ ತಲೆನೋವು ಕೂಡ ನಿವಾರಣೆಯಾಗುತ್ತದೆ.

ಕೆಲವೊಮ್ಮೆ ಅಜೀರ್ಣ ಮತ್ತು ಗ್ಯಾಸ್‌ ಸಮಸ್ಯೆಯಿಂದಲೂ ತಲೆನೋವು ಬರಬಹುದು. ಅಂತಹ ಸಂದರ್ಭದಲ್ಲಿ ಅರ್ಧ ಚಮಚ ಜೀರಿಗೆ, ಅರ್ಧ ಚಮಚ ಸೋಂಪು, ಅರ್ಧ ಚಮಚ ಓಮವನ್ನು ಒಂದು ಲೋಟ ನೀರಿನಲ್ಲಿ ಕುದಿಸಿ. ನಂತರ ಅದನ್ನು ಚೆನ್ನಾಗಿ ಶೋಧಿಸಿ ಸ್ವಲ್ಪ ನಿಂಬೆರಸ ಹಿಂಡಿಕೊಂಡು ಉಗುರುಬೆಚ್ಚಗಿರುವಾಗ ಕುಡಿಯಿರಿ.

ಇನ್ನು ದೇಹದಲ್ಲಿ ದೌರ್ಬಲ್ಯ, ಸುಸ್ತು ಇದ್ದರೆ ಅದಕ್ಕೂ ಸುಲಭದ ಪರಿಹಾರವಿದೆ. ಸ್ವಲ್ಪ ಕಲ್ಲು ಉಪ್ಪು, ಒಂದು ಹೋಳು ತೆಂಗಿನಕಾಯಿ, 2 ಖರ್ಜೂರ ಮತ್ತು 6 ರಿಂದ 7 ಒಣದ್ರಾಕ್ಷಿಗಳನ್ನು ನಿಂಬೆ ರಸದಲ್ಲಿ ಬೆರೆಸಿ ಸೇವಿಸಿ. ಇದು ನಿಮಗೆ ಚೈತನ್ಯವನ್ನು ನೀಡುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...