ನವದೆಹಲಿ: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ಪರ ಮೇಘಾಲಯ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ಬೆಂಬಲಿಸಿದ್ದು, ಆಡಳಿತರೂಢ ಬಿಜೆಪಿಯನ್ನು ಟೀಕಿಸಿದ್ದಾರೆ.
ಕರ್ನಾಲ್ ನಲ್ಲಿ ರೈತರ ಮೇಲೆ ನಡೆದ ಲಾಠಿ ಚಾರ್ಜ್ ಗೆ ಹರಿಯಾಣ ಮುಖ್ಯಮಂತ್ರಿ ಎಂ.ಎಲ್.ಖಟ್ಟರ್ ಕ್ಷಮೆ ಕೇಳಬೇಕು ಎಂದು ಈ ವೇಳೆ ರಾಜ್ಯಪಾಲರು ಆಗ್ರಹಿಸಿದ್ದಾರೆ. ಅಲ್ಲದೆ ಪ್ರತಿಭಟನೆ ನಡೆಸುತ್ತಿರುವ ‘ರೈತರ ತಲೆ ಒಡೆಯಿರಿ’ ಎಂದು ಆದೇಶ ನೀಡಲಾಗಿದೆ ಎನ್ನಲಾದ ವಿಡಿಯೋ ಆನ್ ಲೈನ್ ನಲ್ಲಿ ಹರಿದಾಡಿದೆ. ಇದರ ವಿರುದ್ಧ ಸಿಡಿಮಿಡಿಗೊಂಡಿರುವ ಮಲಿಕ್ ಉನ್ನತಾಧಿಕಾರಿಗಳನ್ನು ವಜಾಗೊಳಿಸವಂತೆ ಒತ್ತಾಯಿಸಿದರು. ಈ ವಿಡಿಯೋ ವಿರುದ್ಧ ವಿರೋಧಪಕ್ಷಗಳೂ ಸಹ ತೀವ್ರ ಪ್ರತಿಭಟನೆ ನಡೆಸಿತು.
ಮದುವೆಯಾಗಲು ಆರು ಅಡಿಗಿಂತ ಕಡಿಮೆ ಎತ್ತರವಿರುವ ವ್ಯಕ್ತಿಯನ್ನು ಸೂಚಿಸಿದ್ದಕ್ಕೆ ಡೇಟಿಂಗ್ ಏಜೆನ್ಸಿ ವಿರುದ್ಧ ಮೊಕದ್ದಮೆ ಹೂಡಿದ ಯುವತಿ..!
“ಮನೋಹರ್ ಲಾಲ್ ಖಟ್ಟರ್ ರೈತರ ಕ್ಷಮೆ ಕೇಳಬೇಕು. ಹರಿಯಾಣ ಸಿಎಂ ರೈತರ ಮೇಲೆ ಲಾಠಿ ಪ್ರಹಾರ ನಡೆಸುತ್ತಿದ್ದಾರೆ. ಕೇಂದ್ರ ಸರಕಾರವು ಬಲವನ್ನು ಪ್ರಯೋಗಿಸಿಲ್ಲ. ಬಲವನ್ನು ಪ್ರಯೋಗಿಸಬೇಡಿ ಎಂದು ನಾನು ಉನ್ನತ ಮಟ್ಟಕ್ಕೆ ಹೇಳಿದ್ದೆ. ನಾನು ರೈತನ ಮಗ” ಎಂದು ಮಾಧ್ಯಮವೊಂದಕ್ಕೆ ರಾಜ್ಯಪಾಲರು ತಿಳಿಸಿದ್ದಾರೆ.
ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಆಯುಷ್ ಸಿನ್ಹಾ ಅವರನ್ನು ಸೇವೆಯಿಂದ ತಕ್ಷಣವೇ ವಜಾ ಮಾಡಬೇಕು. ಅವರು ಎಸ್ ಡಿ ಎಂ ಹುದ್ದೆಗೆ ಸೂಕ್ತರಲ್ಲ. ಸರಕಾರವು ಅವರನ್ನು ಬೆಂಬಲಿಸುತ್ತಿದೆ ಎಂದು ರಾಜ್ಯಪಾಲರು ಆರೋಪಿಸಿದರು.