ಮಳೆಗಾಲದಲ್ಲಿ ಫಂಗಲ್ ಸೋಂಕಿನ ಅಪಾಯ ಹೆಚ್ಚಿರುತ್ತದೆ. ಮಳೆಗಾಲದಲ್ಲಿ ಬ್ಯಾಕ್ಟೀರಿಯಾಗಳು ಸಾಮಾನ್ಯವಾಗಿ ಹಲವು ಪಟ್ಟು ವೇಗವಾಗಿ ಹರಡುತ್ತವೆ. ಕಾಲ್ಬೆರಳು ಸೇರಿದಂತೆ ದೇಹದ ನಿರ್ಲಕ್ಷ್ಯಿತ ಸ್ಥಳಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
ಮಳೆಗಾಲದಲ್ಲಿ ಜನರು ತುಂತುರು ಮಳೆಯಲ್ಲಿ ನೆನೆಯುತ್ತಾರೆ. ತಕ್ಷಣ ಬಟ್ಟೆ ಬದಲಿಸಿ, ಚರ್ಮದ ರಕ್ಷಣೆ ಮಾಡುವುದಿಲ್ಲ. ಅಜಾಗರೂಕತೆಯಿಂದ ಶಿಲೀಂಧ್ರದ ಸೋಂಕಿಗೆ ಒಳಗಾಗುತ್ತಾರೆ. ಈ ಸೋಂಕಿನಲ್ಲಿ ಅನೇಕ ವಿಧಗಳಿವೆ. ನೆತ್ತಿಯಲ್ಲಿ ಕಾಣಿಸಿಕೊಳ್ಳುವ ಸೋಂಕಿನ ಲಕ್ಷಣಗಳು ಸಾಮಾನ್ಯ ಶಿಲೀಂಧ್ರ ಸೋಂಕಿಗಿಂತ ಭಿನ್ನವಾಗಿರುತ್ತವೆ. ನೆತ್ತಿಯ ಮೇಲೆ ಸಣ್ಣ ಉಬ್ಬುಗಳು, ಮೊಡವೆಗಳು ಕಾಣಿಸಿಕೊಳ್ಳುತ್ತವೆ. ಇಂತಹ ಯಾವುದೇ ರೋಗಲಕ್ಷಣ ಕಂಡು ಬಂದರೂ ತಕ್ಷಣ ತಜ್ಞರ ಭೇಟಿಯಾಗಿ. ಇಲ್ಲವಾದ್ರೆ ಕೂದಲುದುರುವ ಸಮಸ್ಯೆ ಕಾಡಲು ಶುರುವಾಗುತ್ತದೆ.
ಶಿಲೀಂಧ್ರ ಸೋಂಕನ್ನು ತಪ್ಪಿಸಲು, ಚರ್ಮವು ದೀರ್ಘಕಾಲದವರೆಗೆ ತೇವವಾಗದಂತೆ ಕಾಳಜಿ ವಹಿಸುವುದು ಬಹಳ ಮುಖ್ಯ. ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಈ ಸಮಸ್ಯೆ ಗಮನಾರ್ಹವಾಗಿ ಹೆಚ್ಚಾಗುತ್ತದೆ. ಬ್ಯಾಕ್ಟೀರಿಯಾ ವಿರೋಧಿ ಸೋಪ್ ಬಳಸಬೇಕು. ಬಟ್ಟೆಗಳನ್ನು ನಿಯಮಿತವಾಗಿ ತೊಳೆಯಬೇಕು. ಚರ್ಮದಲ್ಲಿ ವಿಚಿತ್ರವಾದ ಕಲೆ, ತುರಿಕೆ, ಗುಳ್ಳೆ ಕಾಣಿಸಿಕೊಂಡಲ್ಲಿ ತಜ್ಞರನ್ನು ಸಂಪರ್ಕಿಸುವುದು ಉತ್ತಮ.