ಯಾವುದೇ ಪರ್ವತವನ್ನು ಹತ್ತುವುದೆಂದ್ರೆ ಅದು ಸಾಧಾರಣವಾದ ಸಾಧನೆಯಲ್ಲ. ವಿಶೇಷವಾಗಿ ಅದು 6,000 ಮೀಟರ್‌ಗಿಂತ ಹೆಚ್ಚು ಎತ್ತರದಲ್ಲಿದ್ದರೆ ಆ ಪರ್ವತವನ್ನು ಏರುವುದು ಅಸಾಧಾರಣ ಸಾಧನೆಯೇ ಸರಿ. ಯುವತಿಯೊಬ್ಬಳು ತನ್ನ ಋತುಚಕ್ರದ ಸಮಯದಲ್ಲಿ ಪರ್ವತವನ್ನೇರಿ ಈ ಸಾಧನೆ ಮಾಡಿದ್ದಾಳೆ.
ಹೌದು, ಹಳೆ ಸಂಪ್ರದಾಯಸ್ಥ ಭಾರತೀಯರಲ್ಲಿ ಋತುಚಕ್ರವೆಂದ್ರೆ ಮಹಿಳೆಯರನ್ನು ಮನೆಯಿಂದ ಹೊರಗಿಡುವ ಸಂಪ್ರದಾಯ ಈ ಹಿಂದೆ ಚಾಲ್ತಿಯಲ್ಲಿತ್ತು. ಈಗಲೂ ಕೂಡ ಕೆಲವೊಂದೆಡೆ ಈ ಮೌಢ್ಯವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಆದರೆ, ತನ್ನ ಋತುಚಕ್ರದ ಸಮಯದಲ್ಲಿ ಯುವತಿ ಮಾಡಿರುವ ಸಾಧನೆ ನಿಜಕ್ಕೂ ಮೆಚ್ಚುವಂಥದ್ದು
ತನ್ನ ಅನುಭವವನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳುತ್ತಾ, ತನ್ನ ಸಾಧನೆಯು ಮುಟ್ಟಿನ ಸುತ್ತಲಿನ ಮಿಥ್ಯೆಗಳನ್ನು ಹೊರಹಾಕುವುದಲ್ಲದೆ ಇತರ ಮಹಿಳೆಯರನ್ನು ಸವಾಲುಗಳನ್ನು ಎದುರಿಸಲು ಪ್ರೇರೇಪಿಸುತ್ತದೆ ಎಂದು ಅವರು ಆಶಿಸಿದ್ದಾರೆ. 26 ವರ್ಷದ ಜನಪ್ರಿಯ ಟ್ರಾವೆಲ್ ಬ್ಲಾಗರ್ ಮತ್ತು ಇನ್‌ಸ್ಟಾಗ್ರಾಮ್ ಪ್ರಭಾವಿ ಪ್ರಕೃತಿ ವರ್ಷ್ನಿ ಅವರು ಪರ್ವತವೇರಿ ಈ ಸಾಧನೆ ಮಾಡಿದ್ದಾರೆ.
ಪ್ರಕೃತಿ ಕೆಲ ಕಾಲ ಏಕವ್ಯಕ್ತಿ ಪ್ರಯಾಣ (ಸೋಲೋ ಟ್ರಿಪ್)ಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಅದು ತನ್ನ ಜೀಪ್‌ನಲ್ಲಿ ರೋಡ್ ಟ್ರಿಪ್‌ಗಳಿಗೆ ಹೋಗುತ್ತಿರಲಿ ಅಥವಾ ಭಾರತದ ದೂರದ ಪರ್ವತ ಪಟ್ಟಣಗಳಿಗೆ ಟ್ರೆಕ್ಕಿಂಗ್ ಮಾಡುತ್ತಿರಲಿ, ಆಕೆ ಅಂತಹ ಸಾಹಸಗಳಲ್ಲಿ ಸಂತೋಷವನ್ನು ಕಂಡುಕೊಳ್ಳುತ್ತಾಳೆ.
ಇದೀಗ ಒಂದು ಹೆಜ್ಜೆ ಮುಂದೆ ಇಟ್ಟ ಪ್ರಕೃತಿ, ಇತ್ತೀಚೆಗೆ ನೇಪಾಳದ ಮೌಂಟ್ ಅಮಾ ದಬ್ಲಾಮ್ (6,812 ಮೀ.) ಗೆ ದಂಡಯಾತ್ರೆ ಕೈಗೊಂಡಿದ್ದರು. ಮುಟ್ಟಿನ ಸೆಳೆತವನ್ನು ಎದುರಿಸುವಾಗ ಶಿಖರವನ್ನು ಏರುವುದು ಮತ್ತಷ್ಟು ಕಷ್ಟಕರವಾಗಿತ್ತು ಎಂದು ತನ್ನ ಚಾರಣದ ಬಗ್ಗೆ ವಿವರಿಸಿದ್ದಾರೆ.
ಹವಾಮಾನ ಮತ್ತು ಮಾನಸಿಕ ಒತ್ತಡದಿಂದಾಗಿ ಅಷ್ಟೊಂದು ಎತ್ತರಕ್ಕೆ ಏರುವುದು ಋತುಚಕ್ರದ ಮೇಲೆ ಪರಿಣಾಮ ಬೀರುತ್ತದೆ ಎಂದು ಜನರು ಹೇಳುತ್ತಾರೆ. ಈ ದಿನಕ್ಕಾಗಿ (ಶಿಖರವನ್ನು ತಲುಪಲು) ಇಷ್ಟು ದಿನ ಕಾಯುತ್ತಿದ್ದ ತನಗೆ ಇದು ಕೇವಲ ಕೆಟ್ಟ ದಿನವಾಗಿತ್ತು ಎಂದು ಹೇಳಿದ್ದಾರೆ.
ಬಹಳ ಸಂಕಷ್ಚಗಳನ್ನು ದಾಟಿಯೂ ಮೌಂಟ್ ಎವರೆಸ್ಟ್ ಶಿಖರ ಏರುವಲ್ಲಿ ಪ್ರಕೃತಿ ಯಶಸ್ವಿಯಾಗಿದ್ದಾರೆ. ಅಂತಹ ಪ್ರತಿಕೂಲ ವಾತಾವರಣದಲ್ಲಿ ಟ್ಯಾಂಪೂನ್ ಅಥವಾ ಪ್ಯಾಡ್‌ಗಳನ್ನು ವಿಲೇವಾರಿ ಮಾಡುವುದು ಕಷ್ಟವಾದ್ರೂ, ಪರಿಸರ ಸ್ನೇಹಿಯಾಗಿರುವ ಮೆನುಸ್ಟ್ರಲ್ ಕಪ್ ಬಳಸುವುದರಿಂದ ಪರಿಸರಕ್ಕೆ ಹಾನಿ ಮಾಡುವ ಯಾವುದನ್ನೂ ವಿಲೇವಾರಿ ಮಾಡಬೇಕಾಗಿಲ್ಲ ಎಂದು ಅವರು ಒತ್ತಿ ಹೇಳಿದ್ದಾರೆ.