ನವದೆಹಲಿ : ವಿದೇಶಿ ಡೆಸ್ಟಿನೇಷನ್ ಬೇಡ, ನಮ್ಮ ದೇಶದಲ್ಲೇ ಮದುವೆ ಆಗಿ ಎಂದು ಪ್ರಧಾನಿ ಮೋದಿ ಸಲಹೆ ನೀಡಿದ್ದಾರೆ.
ಮನ್ ಕೀ ಬಾತ್ ನಲ್ಲಿ ಮಾತನಾಡಿದ ಪ್ರಧಾನಿ ಮೋದಿ ಶ್ರೀಮಂತ ಉದ್ಯಮಿಗಳು ಹಾಗೂ ಸೆಲೆಬ್ರಿಟಿಗಳು ವಿದೇಶದಲ್ಲಿ ವಿವಾಹ ಮಾಡಿಕೊಳ್ಳುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿದೇಶದಲ್ಲಿ ಅಂತಹ ಆಚರಣೆ ಮಾಡಿಕೊಳ್ಳುವ ಅಗತ್ಯ ಏನಿದೆ, ನಮ್ಮ ದೇಶದಲ್ಲೇ ಮದುವೆ ಮಾಡಿಕೊಂಡರೆ ಹಣ ಭಾರತದಿಂದ ಹೊರಕ್ಕೆ ಹೋಗಲ್ಲ, ವಿದೇಶದಲ್ಲಿ ಮದುವೆ ಮಾಡಿಕೊಂಡರೆ ಹಣ ಅಲ್ಲಿಗೆ ಸೇರುತ್ತದೆ ಎಂದು ಹೇಳಿದ್ದಾರೆ.
ಮದುವೆಯ ಸೀಸನ್ ಶುರುವಾಗಿದ್ದು, ಕೆಲವು ಕುಟುಂಬಗಳು ವಿದೇಶಕ್ಕೆ ಹೋಗಿ ವಿವಾಹ ಮಾಡಿಕೊಳ್ಳುವ ವಾತಾವರಣ ನಿರ್ಮಾಣವಾಗಿದೆ. ಇದರ ಅಗತ್ಯವೇನಿದೆ ಎಂದು ಪ್ರಧಾನಿ ಮೋದಿ ಪ್ರಶ್ನಿಸಿದ್ದಾರೆ.