ರಾಮನಗರ : ‘ಗೃಹಲಕ್ಷ್ಮೀ’ ಯೋಜನೆಯ ಹಣ ನಿಮ್ಮ ಗಂಡಂದಿರಿಗೆ ಕೊಡಬೇಡಿ, ಉಳಿತಾಯ ಮಾಡಿ ಎಂದು ಮನೆ ಯಜಮಾನಿಯರಿಗೆ ಡಿಸಿಎಂ ಡಿಕೆ ಶಿವಕುಮಾರ್ ಸಲಹೆ ನೀಡಿದರು.
ಮಾಗಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ ಸದ್ಯ, ಶೇ 88 ರಷ್ಟು ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆ ಹಣ ತಲುಪಿದೆ. ಉಳಿದವರಿಗೆ ಬ್ಯಾಂಕ್ ಖಾತೆ ಸಮಸ್ಯೆಯಿಂದ ಹಣ ಬಂದಿಲ್ಲ, ಶೀಘ್ರವೇ ಈ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಹೇಳಿದರು.
ಮಹಿಳೆಯರೇ ಗೃಹಲಕ್ಷ್ಮೀ ಯೋಜನೆಯ 2,000 ಹಣವನ್ನು ನಿಮ್ಮ ಗಂಡಂದಿರಿಗೆ ನೀಡಬೇಡಿ. ಉಳಿತಾಯ ಮಾಡಿ, ಮಕ್ಕಳ ಭವಿಷ್ಯಕ್ಕೆ ಬಳಸಿಕೊಳ್ಳಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸಲಹೆ ನೀಡಿದರು. ರಾಜ್ಯ ಸರ್ಕಾರದ ಮಹತ್ವದ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯಡಿ ಮನೆಯ ಯಜಮಾನಿಗೆ ಪ್ರತಿ ತಿಂಗಳು 2000 ರೂ ನೀಡಲಾಗುತ್ತಿದೆ.