ತಂಪಾಗಿಡುವ ಕೆಲವು ಹಣ್ಣುಗಳನ್ನು ನೀವು ಈ ಅವಧಿಯಲ್ಲಿ ಸೇವಿಸುವುದು ಕಡ್ಡಾಯ. ಅವುಗಳು ಯಾವುವೆಂದರೆ…
ಕಲ್ಲಂಗಡಿ ಹಣ್ಣಿನಲ್ಲಿ ಸಾಕಷ್ಟು ಪ್ರಮಾಣದ ನೀರಿನಂಶವಿದ್ದು ಇದು ನಿಮ್ಮ ದೇಹ ನಿರ್ಜಲೀಕರಣಗೊಳ್ಳದಂತೆ ನೋಡಿಕೊಳ್ಳುತ್ತದೆ. ಇದರ ಜ್ಯೂಸ್ ತಯಾರಿಸಿ ಕುಡಿಯುವುದು, ಹಾಗೆ ತಿನ್ನುವುದೂ ಒಳ್ಳೆಯದು. ಸಲಾಡ್ ಮಾಡಿಕೊಟ್ಟರೆ ಮಕ್ಕಳೂ ಇಷ್ಟಪಡುತ್ತಾರೆ.
ಬೇಸಿಗೆಯಲ್ಲಿ ಸಿಗುವ ಕರಬೂಜ ಹಣ್ಣನ್ನು ಹಸಿಯಾಗಿ ಅಥವಾ ಜ್ಯೂಸ್ ತಯಾರಿಸಿಕೊಂಡು ಕುಡಿಯಬಹುದು. ಇದು ಜೀರ್ಣಕ್ರಿಯೆಯನ್ನು ಸರಾಗಗೊಳಿಸಿ ಮಲಬದ್ಧತೆಯನ್ನು ನಿವಾರಿಸುತ್ತದೆ. ಮೂತ್ರಸಂಬಂಧಿ ಸೋಂಕುಗಳು ಬರದಂತೆ ತಡೆಯುತ್ತದೆ.
ಹಣ್ಣುಗಳ ರಾಜ ಮಾವಿನಹಣ್ಣು ಬೇಸಗೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ದೊರೆಯುತ್ತದೆ. ಇದರಲ್ಲಿ ಸಾಕಷ್ಟು ಪ್ರಮಾಣದ ನಾರಿನಂಶವಿದೆ. ಪ್ರೊಟೀನ್ ಗಳಿವೆ. ಇದನ್ನು ತಾಜಾ ಆಗಿಯೂ ಸ್ಮೂದಿ, ಲಸ್ಸಿ ಅಥವಾ ಮಿಲ್ಕ್ ಶೇಖ್ ರೂಪದಲ್ಲಿಯೂ ಸವಿಯಬಹುದು.