ಕಿವಿ ಮೇಣದಂತಹ ವಸ್ತುಗಳನ್ನು ಸ್ರವಿಸುತ್ತದೆ. ಇದು ಕಿವಿಯೊಳಗೆ ನೀರು, ಧೂಳು, ಬ್ಯಾಕ್ಟೀರಿಯಾಗಳು ಹೋಗದಂತೆ ರಕ್ಷಿಸುತ್ತದೆ. ಆದರೆ ಇದನ್ನು ಕಿವಿಯೊಳಗಿನಿಂದ ಹೊರಗೆ ತೆಗೆಯುತ್ತಿರುಬೇಕು. ಇಲ್ಲವಾದರೆ ಕಿವಿನೋವು ಶುರುವಾಗುತ್ತದೆ. ಅದಕ್ಕಾಗಿ ಈ ಮನೆಮದ್ದನ್ನು ಬಳಸಿ.
*ಉಪ್ಪು ನೀರು : ಉಪ್ಪು ನೀರು ಈ ಮೇಣವನ್ನು ಮೃದುವಾಗಿಸುತ್ತದೆ. 1 ಚಮಚ ಉಪ್ಪನ್ನು ½ ಕಪ್ ನೀರಿನಲ್ಲಿ ಬೆರೆಸಿ ಹತ್ತಿಯ ಉಂಡೆಯಿಂದ 2 ಹನಿ ನೀರನ್ನು ಕಿವಿಯೊಳಗೆ ಹಾಕಿ. 5 ನಿಮಿಷ ಬಿಟ್ಟ ಬಳಿಕ ಅದು ಮೃದುವಾಗಿರುತ್ತದೆ. ಅದನ್ನು ಕ್ಲೀನ್ ಮಾಡಿ.
*ಆಲಿವ್ ಆಯಿಲ್ : ಈ ಎಣ್ಣೆ ಕೂಡ ಕಿವಿ ಮೇಣವನ್ನು ಕರಗಿಸುತ್ತದೆ. ಹಾಗಾಗಿ 4 ಹನಿ ಆಲಿವ್ ಆಯಿಲ್ ನ್ನು ಕಿವಿಯೊಳಗೆ ಹಾಕಿ 10 ನಿಮಿಷ ಬಿಟ್ಟರೆ ಅದು ಮೃದುವಾಗಿ ಕರಗಿ ಹೊರ ಬರುತ್ತದೆ.
*ಅಡುಗೆ ಸೋಡಾ : ಇದು ಕೂಡ ಕಿವಿಯ ಮೇಣವನ್ನು ಮೃದುವಾಗಿಸುತ್ತದೆ. 2 ಚಮಚ ನೀರಿನಲ್ಲಿ ¼ ಚಮಚ ಅಡುಗೆ ಸೋಡಾ ಹಾಕಿ ಮಿಶ್ರಣ ಮಾಡಿ ಕಿವಿಗೆ 2 ಹನಿ ಹಾಕಿ 10 ನಿಮಿಷದ ಬಳಿಕ ಕ್ಲೀನ್ ಮಾಡಿ.