ಶ್ರಾವಣ ಮಾಸ ಶುರುವಾಗಿದೆ. ಶಿವನ ಆರಾಧನೆಗೆ ಶಿವ ಭಕ್ತರು ಸಿದ್ಧತೆ ನಡೆಸುತ್ತಿದ್ದಾರೆ. ಶಿವ ಪೂಜೆಗೆ ಕೆಲವೊಂದು ನಿಷಿದ್ಧ. ಪೂಜೆ ವೇಳೆ ಅಪ್ಪಿತಪ್ಪಿ ಆ ವಸ್ತುಗಳನ್ನು ಬಳಸಿದ್ರೆ ಪೂಜೆ ಫಲ ನೀಡುವ ಬದಲು ಅಶುಭಕ್ಕೆ ಕಾರಣವಾಗುತ್ತದೆ.
ಶಿವನ ಆರಾಧನೆ ವೇಳೆ ಶಂಖವನ್ನು ಬಳಸಬೇಡಿ. ಶಿವ ಶಂಖಚೂಡ ಹೆಸರಿನ ಅಸುರನ ಹತ್ಯೆಗೈದಿದ್ದ. ಶಂಖವನ್ನು ಅಸುರನಿಗೆ ಹೋಲಿಕೆ ಮಾಡಲಾಗುತ್ತದೆ. ಆತ ವಿಷ್ಣು ಭಕ್ತನಾಗಿದ್ದ. ಹಾಗಾಗಿ ಶಿವನಿಗೆ ಶಂಖ ನಿಷಿದ್ಧ.
ತುಳಸಿಯನ್ನು ವಿಷ್ಣುವಿನ ಪತ್ನಿ ರೂಪದಲ್ಲಿ ನೋಡಲಾಗುತ್ತದೆ. ಹಾಗಾಗಿ ತುಳಸಿಯನ್ನೂ ಶಿವನಿಗೆ ಅರ್ಪಿಸಬಾರದು.
ಎಳ್ಳು ವಿಷ್ಣುವಿನ ಮಲದಿಂದ ಹುಟ್ಟಿದ್ದು ಎನ್ನಲಾಗುತ್ತದೆ. ಇದೇ ಕಾರಣಕ್ಕೆ ಶಿವನಿಗೆ ಎಳ್ಳಿನ ಅಭಿಷೇಕ ಮಾಡುವುದಿಲ್ಲ.
ಮುರಿದ ಅಕ್ಕಿ ಕಾಳು ಅಥವಾ ಅಕ್ಷತೆಯನ್ನು ಶಿವನಿಗೆ ಅರ್ಪಣೆ ಮಾಡಬಾರದು. ಮುರಿದ ಅಕ್ಕಿ ಕಾಳು ಅಶುಭವೆಂದು ಪರಿಗಣಿಸಲಾಗಿದೆ.
ಕುಂಕುಮ ಸೌಭಾಗ್ಯದ ಸಂಕೇತ. ಶಿವ ವೈರಾಗಿ. ಹಾಗಾಗಿ ಶಿವನಿಗೆ ಕುಂಕುಮ ನಿಷಿದ್ಧ.
ಅರಿಶಿನವನ್ನು ಭಗವಂತ ವಿಷ್ಣು ಹಾಗೂ ಸೌಭಾಗ್ಯಕ್ಕೆ ಹೋಲಿಸಲಾಗುತ್ತದೆ. ಶ್ರಾವಣ ಮಾಸದಲ್ಲಿ ಶಿವನಿಗೆ ಅರಿಶಿನ ಅರ್ಪಿಸಬೇಡಿ.
ಹಾಲು ಲಕ್ಷ್ಮಿ ಪ್ರತೀಕ. ಇದೇ ಕಾರಣಕ್ಕೆ ಶಿವನಿಗೆ ಹಾಲಿನ ಅಭಿಷೇಕ ಮಾಡಬಾರದು.