ಮನೆಯಲ್ಲಿ ಯಾರಿಗೋ ಹುಷಾರಿಲ್ಲ ಎಂಬ ಕಾರಣಕ್ಕೆ ತಂದ ಬ್ರೆಡ್ ಪ್ಯಾಕೆಟ್ ನಲ್ಲಿ ಒಂದೆರಡಷ್ಟೇ ಬಳಕೆಯಾಗಿ ಉಳಿದದ್ದೆಲ್ಲಾ ಹಾಗೇ ಬಾಕಿ ಉಳಿದಿದೆಯೇ. ಹಾಗಿದ್ದರೆ ಅದನ್ನು ಸಂರಕ್ಷಿಸಿ ಇಡುವುದು ಹೇಗೆಂದು ನೋಡೋಣ.
ಮೊದಲಿಗೆ ಬ್ರೆಡ್ ಮನೆಗೆ ತಂದು ಎರಡರಿಂದ ಮೂರು ದಿನಗಳೊಳಗೆ ಸೇವಿಸುವುದು ಬಹಳ ಮುಖ್ಯ. ಹಸಿಯಾಗಿ ತಿನ್ನಲು ಸಾಧ್ಯವಿಲ್ಲದಿದ್ದರೆ ಬ್ರೆಡ್ ರೋಸ್ಟ್ ಮಾಡಿ, ಉಪ್ಮ ತಯಾರಿಸಿ ಇಲ್ಲವೇ ಸ್ಯಾಂಡ್ ವಿಚ್ ರೂಪದಲ್ಲಿ ಸೇವಿಸಿ ತಿನ್ನಿ. ಮಕ್ಕಳಿಗೂ ತಿನ್ನಲು ಕೊಡಿ.
ಅದಕ್ಕಿಂತ ಹೆಚ್ಚಿನ ದಿನ ಅದನ್ನು ಹೊರಗಿಟ್ಟರೆ ಫಂಗಸ್ ಕಾಣಿಸಿಕೊಳ್ಳುತ್ತದೆ. ಇದು ಆರೋಗ್ಯಕ್ಕೆ ಹಾನಿಕಾರಕ. ಇದರ ಸೇವನೆಯಿಂದ ಫುಡ್ ಪಾಯ್ಸನಿಂಗ್ ಉಂಟಾಗಬಹುದು. ವಾಂತಿ ಬೇಧಿ ಕಾಣಿಸಿಕೊಳ್ಳಬಹುದು. ಹಾಗಾಗಿ ಇದನ್ನು ಬಳಸದೆ ಎಸೆಯುವುದು ಒಳ್ಳೆಯದು.
ಅನಿವಾರ್ಯವಾಗಿ ಫ್ರಿಜ್ ನಲ್ಲಿಡುವ ಸಂದರ್ಭ ಬಂದರೆ ಗಾಳಿಯಾಡದಂತೆ ಪ್ಲಾಸ್ಟಿಕ್ ಕವರ್ ನಲ್ಲಿ ಸುತ್ತಿ. ಹಾಗಿದ್ದರೂ ಮೂರು ದಿನಗಳ ಬಳಿಕ ಇದನ್ನು ಬಳಸುವುದು ಒಳ್ಳೆಯದಲ್ಲ. ಬೆಳಗಿನ ತಿಂಡಿಗೋ ಸಂಜೆಯ ಸ್ನಾಕ್ಸ್ ಗೋ ಬಳಸಿ ಖಾಲಿ ಮಾಡುವುದು ಒಳ್ಳೆಯದು.