ಹೊಟ್ಟೆ ನೋವಿನ ಸಮಸ್ಯೆ ತುಂಬಾ ಸಾಮಾನ್ಯವಾಗಿದೆ. ಇದಕ್ಕೆ ಹಲವು ಕಾರಣಗಳಿರಬಹುದು. ಸಾಮಾನ್ಯವಾಗಿ ಆಹಾರದಲ್ಲಿನ ವ್ಯತ್ಯಾಸದಿಂದ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಹೊಟ್ಟೆ ನೋವು ಇದ್ದಾಗ ಕೆಲವೊಂದು ಪದಾರ್ಥಗಳನ್ನು ಅಪ್ಪಿತಪ್ಪಿಯೂ ಸೇವಿಸಬಾರದು. ಅವು ಯಾವುವು ? ಅವುಗಳಿಂದಾಗುವ ತೊಂದರೆಗಳೇನು ಅನ್ನೋದನ್ನು ನೋಡೋಣ.
ಡೈರಿ ಉತ್ಪನ್ನಗಳು: ಹೊಟ್ಟೆ ನೋವಿನ ಸಮಸ್ಯೆ ಇದ್ದಾಗ ಹಾಲು, ಚೀಸ್ ಮತ್ತು ಐಸ್ ಕ್ರೀಮ್ ಅನ್ನು ಸೇವಿಸಬಾರದು. ಈ ಡೈರಿ ಉತ್ಪನ್ನಗಳು ನಿಮಗೆ ಹಾನಿ ಮಾಡಬಹುದು. ಇವುಗಳ ಸೇವನೆಯಿಂದ ಹೊಟ್ಟೆ ನೋವು ಹೆಚ್ಚಾಗಬಹುದು. ಏಕೆಂದರೆ ಇವುಗಳನ್ನೆಲ್ಲ ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ.
ಹುರಿದ ತಿನಿಸು: ಎಣ್ಣೆಯಲ್ಲಿ ಹುರಿದ ಅಥವಾ ಕರಿದ ಆಹಾರ ಆರೋಗ್ಯಕ್ಕೆ ಹಾನಿಕಾರಕ ಅನ್ನೋದು ನಮಗೆಲ್ಲರಿಗೂ ತಿಳಿದಿದೆ. ಅದಕ್ಕಾಗಿಯೇ ಯಾವಾಗಲೂ ಅವುಗಳಿಂದ ದೂರವಿರುವುದು ಉತ್ತಮ.
ಹೊಟ್ಟೆನೋವಿನ ಸಮಸ್ಯೆ ಇದ್ದರೆ ಕರಿದ ಪದಾರ್ಥಗಳನ್ನು ಸೇವನೆ ಮಾಡಬೇಡಿ. ಏಕೆಂದರೆ ಕರಿದ ಆಹಾರಗಳಲ್ಲಿ ಎಣ್ಣೆ ಮತ್ತು ಕೊಬ್ಬು ತುಂಬಾ ಹೆಚ್ಚಾಗಿರುತ್ತದೆ. ದೇಹವು ಇವುಗಳನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ, ಈ ಆಹಾರಗಳು ಹೊಟ್ಟೆ ನೋವನ್ನು ಹೆಚ್ಚಿಸುತ್ತವೆ.
ಮಸಾಲೆಯುಕ್ತ ಆಹಾರ: ಮಸಾಲೆಯುಕ್ತ ಆಹಾರವನ್ನು ನೀವು ಇಷ್ಟಪಡ್ತಾ ಇದ್ರೆ ಈ ಅಭ್ಯಾಸವನ್ನು ಬಿಡಬೇಕು. ಮಸಾಲೆ ಪದಾರ್ಥಗಳು ಹೊಟ್ಟೆಯಲ್ಲಿ ಉರಿ ಉಂಟುಮಾಡುತ್ತದೆ. ಹೊಟ್ಟೆ ನೋವಿದ್ದಾಗ ಮಸಾಲೆ ಪದಾರ್ಥಗಳ ಸೇವನೆ ಬೇಡ. ಜೊತೆಗೆ ಮೆಣಸಿನಕಾಯಿಯನ್ನೂ ತಿನ್ನದಿರುವುದು ಉತ್ತಮ.