ಚಳಿಗಾಲದಲ್ಲಿ ಬಿಸಿ ಬಿಸಿ ಚಹಾದೊಂದಿಗೆ ದಿನವನ್ನು ಪ್ರಾರಂಭಿಸುವುದು ಮನಸ್ಸಿಗೆ ಖುಷಿ ಕೊಡುತ್ತದೆ. ಅನೇಕ ಜನರು ಚಹಾವನ್ನು ತುಂಬಾ ಇಷ್ಟಪಡುತ್ತಾರೆ. ಬೆಳಗ್ಗೆ, ಸಂಜೆ, ಮಧ್ಯಾಹ್ನ ಹೀಗೆ ಯಾವಾಗ ಬೇಕಾದರೂ ಚಹಾ ಕುಡಿಯುತ್ತಾರೆ. ಚಹಾದಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಆದರೆ ಚಹಾವನ್ನು ಸೀಮಿತ ಪ್ರಮಾಣಕ್ಕಿಂತ ಹೆಚ್ಚು ಸೇವಿಸಿದರೆ ಅನಾನುಕೂಲಗಳು ಖಚಿತ.
ಚಹಾದ ಚಟವು ವಿಷಕ್ಕಿಂತ ಕಡಿಮೆಯೇನಿಲ್ಲ. ಅತಿಯಾಗಿ ಚಹಾ ಕುಡಿಯುವುದರಿಂದ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಹಲವಾರು ರೋಗಗಳನ್ನು ಎದುರಿಸಬೇಕಾಗುತ್ತದೆ. ಚಳಿಗಾಲದಲ್ಲಿ ಮಿತಿಮೀರಿದ ಪ್ರಮಾಣದಲ್ಲಿ ಚಹಾ ಕುಡಿಯುವುದರಿಂದ ಆಗುವ ದುಷ್ಪರಿಣಾಮಗಳೇನು ಎಂಬುದನ್ನು ನೋಡೋಣ.
ಕಬ್ಬಿಣದ ಕೊರತೆ – ಅತಿಯಾಗಿ ಟೀ ಕುಡಿಯುವುದರಿಂದ ದೇಹದಲ್ಲಿ ಕಬ್ಬಿಣಾಂಶ ಕಡಿಮೆಯಾಗುತ್ತದೆ. ಚಹಾದಲ್ಲಿ ಕಂಡುಬರುವ ಟ್ಯಾನಿನ್ ಎಂಬ ವಸ್ತುವು ದೇಹದಲ್ಲಿರುವ ಕಬ್ಬಿಣಕ್ಕೆ ಅಂಟಿಕೊಳ್ಳುತ್ತದೆ ಮತ್ತು ಅದನ್ನು ಕ್ರಮೇಣ ಕಡಿಮೆ ಮಾಡುತ್ತದೆ. ರಕ್ತಹೀನತೆಯಿಂದ ಬಳಲುತ್ತಿರುವ ಜನರು ಹೆಚ್ಚು ಚಹಾ ಸೇವಿಸುವುದನ್ನು ತಪ್ಪಿಸಬೇಕು.
ಆಯಾಸ – ಚಡಪಡಿಕೆ – ಅತಿಯಾಗಿ ಟೀ ಕುಡಿಯುವುದರಿಂದ ದೇಹ ಸೋಮಾರಿಯಾಗುತ್ತದೆ. ಏಕೆಂದರೆ ಚಹಾದಲ್ಲಿರುವ ಕೆಫೀನ್, ಆಯಾಸ ಮತ್ತು ಚಡಪಡಿಕೆಗೆ ಕಾರಣವಾಗುತ್ತದೆ.
ನಿದ್ರಾಹೀನತೆ – ಹೆಚ್ಚು ಟೀ ಕುಡಿಯುವುದರಿಂದ ನಿದ್ರೆಗೆ ತೊಂದರೆಯಾಗುತ್ತದೆ. ಸರಿಯಾಗಿ ನಿದ್ದೆ ಬಾರದವರು ಹೆಚ್ಚು ಚಹಾ ಸೇವಿಸಬಾರದು.
ಹೊಟ್ಟೆಗೆ ಸಂಬಂಧಿಸಿದ ರೋಗಗಳು – ಅತಿಯಾಗಿ ಟೀ ಕುಡಿಯುವುದರಿಂದ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು ಬರಬಹುದು. ಸಾಮಾನ್ಯವಾಗಿ ಟೀ ಕುಡಿಯುವುದರಿಂದ ಅಸಿಡಿಟಿ ಮತ್ತು ಗ್ಯಾಸ್ ಸಮಸ್ಯೆ ಎದುರಿಸಬೇಕಾಗುತ್ತದೆ.
ನಿರ್ಜಲೀಕರಣ – ಚಹಾ ಸೇವನೆಯು ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಚಹಾದಲ್ಲಿರುವ ಕೆಫೀನ್ ದೇಹದಿಂದ ನೀರನ್ನು ಹೀರಿಕೊಳ್ಳುತ್ತದೆ, ಇದು ನೀರಿನ ಮಟ್ಟವನ್ನು ಕಡಿಮೆ ಮಾಡುತ್ತದೆ.
ರಕ್ತದೊತ್ತಡ – ರಕ್ತದೊತ್ತಡದಿಂದ ಬಳಲುತ್ತಿರುವ ರೋಗಿಗಳು ಹೆಚ್ಚು ಚಹಾ ಕುಡಿಯುವುದನ್ನು ತಪ್ಪಿಸಬೇಕು. ಅತಿಯಾದ ಚಹಾ ಸೇವನೆಯು ಅವರಲ್ಲಿ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ.