ಕಲಿಯುಗದಲ್ಲಿ ಪುಣ್ಯ ಸಿಗಬೇಕೆಂದ್ರೆ ದಾನ ಮಾಡಬೇಕೆಂಬ ನಂಬಿಕೆಯಿದೆ. ದಾನ ಮಾಡಿದ್ರೆ ಪುಣ್ಯ ಪ್ರಾಪ್ತಿಯಾಗುತ್ತದೆ ನಿಜ. ಆದ್ರೆ ದಾನ ಮಾಡುವ ಮೊದಲು ಕೆಲವೊಂದು ವಿಷ್ಯಗಳ ಬಗ್ಗೆ ತಿಳಿದಿರಬೇಕಾಗುತ್ತದೆ. ಕೆಲವೊಂದು ವಸ್ತುಗಳನ್ನು ದಾನ ಮಾಡಿದ್ರೆ ಪುಣ್ಯ ಪ್ರಾಪ್ತಿಯಾಗುವ ಬದಲು ಪಾಪ ಅಂಟಿಕೊಳ್ಳುತ್ತದೆ.
ಪುಸ್ತಕವನ್ನು ದಾನ ಮಾಡಬೇಕು ಎಂದು ಗ್ರಂಥಗಳಲ್ಲಿ ಹೇಳಲಾಗಿದೆ. ಆದ್ರೆ ಹರಿದ ಹಾಗೂ ಹಳೆಯ ಪುಸ್ತಕಗಳನ್ನು ಎಂದೂ ದಾನ ಮಾಡಬಾರದು. ಧಾರ್ಮಿಕ ಗ್ರಂಥಗಳನ್ನು ದಾನ ಮಾಡುವಾಗ ಈ ಬಗ್ಗೆ ಗಮನವಿರಬೇಕು. ಒಂದು ವೇಳೆ ಹರಿದ, ಹಳೆಯ ಪುಸ್ತಕಗಳನ್ನು ದಾನ ಮಾಡಿದ್ರೆ ಸಮಸ್ಯೆ ಕಾಡುತ್ತದೆ. ಕುಟುಂಬದಲ್ಲಿ ಶಾಂತಿ ಕದಡುತ್ತದೆ.
ಎಂದೂ ಪೊರಕೆಯನ್ನು ದಾನ ಮಾಡಬಾರದು. ಇದು ಆರ್ಥಿಕ ಸಮಸ್ಯೆಗೆ ಕಾರಣವಾಗುತ್ತದೆ. ಪೊರಕೆ ಲಕ್ಷ್ಮಿಯ ಸಂಕೇತ. ಪೊರಕೆ ದಾನ ಮಾಡಿದ್ರೆ ಲಕ್ಷ್ಮಿ ಕೋಪಗೊಳ್ತಾಳೆ. ನೌಕರಿಯಲ್ಲಿ ಹಿನ್ನಡೆಯಾಗುತ್ತದೆ.
ಆಹಾರ, ಅನ್ನದಾನ ಪುಣ್ಯದ ಕೆಲಸ. ಆದ್ರೆ ಎಂದೂ ಹಳಸಿದ, ಹಳೆಯ ಅನ್ನವನ್ನು ದಾನ ಮಾಡಬಾರದು. ಕುಟುಂಬದ ಸದಸ್ಯರು ಅನಾರೋಗ್ಯಕ್ಕೊಳಗಾಗುವ ಸಾಧ್ಯತೆಯಿರುತ್ತದೆ. ಕಾನೂನು ಸಮಸ್ಯೆ ಎದುರಾಗುತ್ತದೆ.
ಸಾಸಿವೆ ಎಣ್ಣೆ ದಾನ ಮಾಡುವುದು ಶುಭಕರ. ಆದ್ರೆ ಬಳಸಿದ ಸಾಸಿವೆ ಎಣ್ಣೆಯನ್ನು ಎಂದೂ ಬಳಸಬಾರದು. ಇದ್ರಿಂದ ಶನಿದೇವ ಕೋಪಗೊಳ್ತಾನೆ.
ಸ್ಟೀಲ್ ಪಾತ್ರೆಗಳನ್ನು ಎಂದೂ ದಾನ ಮಾಡಬಾರದು. ಇದು ಸಂಬಂಧವನ್ನು ಹಾಳು ಮಾಡುತ್ತದೆ. ಕುಟುಂಬದ ಖುಷಿ ಹಾಳಾಗುತ್ತದೆ.
ಅನೇಕರು ತಮ್ಮ ಹಳೆ ವಸ್ತುಗಳನ್ನು ದಾನ ಮಾಡ್ತಾರೆ. ಇದು ಪಾಪದ ಕೆಲಸ. ಇದ್ರಿಂದ ಆರ್ಥಿಕ ಸಮಸ್ಯೆ ಎದುರಾಗುತ್ತದೆ.