ಹಿಂದೂ ಧರ್ಮದಲ್ಲಿ ಸೂರ್ಯನನ್ನು ದೇವರೆಂದು ಪೂಜೆ ಮಾಡಲಾಗುತ್ತದೆ. ಭಾನುವಾರ ಸೂರ್ಯದೇವನ ವಾರವೆಂದು ನಂಬಲಾಗಿದೆ. ಸೂರ್ಯ ಪ್ರಸನ್ನನಾದ್ರೆ ಸಮಾಜದಲ್ಲಿ ಗೌರವ, ಸನ್ಮಾನ ದೊರಕುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಸೂರ್ಯದೇವನಿಗೆ ಜಲ ಅರ್ಪಿಸುವ ವೇಳೆ ಹಾಗೂ ಪೂಜೆ ಮಾಡುವ ವೇಳೆ ಮಾಡುವ ಕೆಲ ತಪ್ಪುಗಳು ಸೂರ್ಯನ ಕೋಪಕ್ಕೆ ಕಾರಣವಾಗುವ ಜೊತೆಗೆ ನಷ್ಟವನ್ನುಂಟು ಮಾಡುತ್ತದೆ.
ಸೂರ್ಯನ ಪೂಜೆ ವೇಳೆ ಕೆಂಪು ಹೂ, ಕೆಂಪು ಚಂದನ, ಕೆಂಪು ದಾಸವಾಳ, ಅಕ್ಷತೆಯನ್ನು ಅರ್ಪಿಸಬೇಕು. ಬೆಲ್ಲದಿಂದ ತಯಾರಿಸಿದ ಸಿಹಿಯನ್ನು ಅರ್ಪಿಸಬೇಕು. ಜಲ ಅರ್ಪಿಸುವ ವೇಳೆ ನೀರು ನಿಮ್ಮ ಕಾಲ ಮೇಲೆ ಬೀಳದಂತೆ ನೋಡಿಕೊಳ್ಳಿ. ನೀರು ಕಾಲಿಗೆ ಬಿದ್ರೆ ಸೂರ್ಯನಿಗೆ ಅರ್ಪಿಸಿದ ಜಲದ ಶುಭ ಫಲ ಭಕ್ತರಿಗೆ ಸಿಗುವುದಿಲ್ಲ. ನೀರಿನಲ್ಲಿ ಹೂ, ಅಕ್ಷತೆ ಇರುವಂತೆ ನೋಡಿಕೊಳ್ಳಿ.
ಭಾನುವಾರ ಸ್ನಾನ ಮಾಡಿ ದೇವಸ್ಥಾನಕ್ಕೆ ಹೋಗಿ. ನಂತ್ರ ಸೂರ್ಯನಿಗೆ ಜಲವನ್ನು ಅರ್ಪಿಸಿ. ಹೀಗೆ ಮಾಡಿದಲ್ಲಿ ಜಾತಕದಲ್ಲಿರುವ ಎಲ್ಲ ದೋಷ ನಿವಾರಣೆಯಾಗುತ್ತದೆ. ಬ್ರಹ್ಮ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿಯೇ ಸೂರ್ಯನಿಗೆ ಜಲ ಅರ್ಪಿಸಬೇಕು. ಸ್ನಾನ ಮಾಡದೆ ಸೂರ್ಯನ ಪೂಜೆ ಮಾಡಬಾರದು.
ಅರ್ಘ್ಯ ಅರ್ಪಿಸುವ ವೇಳೆ ಸ್ಟೀಲ್, ಬೆಳ್ಳಿ, ಗಾಜು, ಪ್ಲಾಸ್ಟಿಕ್ ಪಾತ್ರೆಯನ್ನು ಬಳಸಬಾರದು. ತಾಮ್ರದ ಪಾತ್ರೆಯನ್ನು ಮಾತ್ರ ಬಳಸಬೇಕು. ಎರಡೂ ಕೈಗಳಲ್ಲಿ ಪಾತ್ರೆಯನ್ನು ತಲೆಗಿಂತ ಮೇಲೆ ಹಿಡಿದು ಜಲವನ್ನು ಅರ್ಪಿಸಬೇಕು. ಹೀಗೆ ಮಾಡಿದಲ್ಲಿ ಸೂರ್ಯನ ಜೊತೆ ನವಗ್ರಹ ಬಲ ಪಡೆಯುತ್ತದೆ. ಪೂರ್ವ ದಿಕ್ಕಿಗೆ ಮುಖ ಮಾಡಿ ನೀರನ್ನು ಅರ್ಪಿಸಬೇಕು.