ಸಲಿಂಗಿಗಳಿರುವ ಕುಟುಂಬಸ್ಥರಿಗೆ ಭಾರತೀಯ ಸಮುದಾಯದಲ್ಲಿ ಭಾರೀ ಮುಜುಗರಭರಿತ ಸನ್ನಿವೇಶಗಳನ್ನು ಎದುರಿಸಬೇಕಾಗಿ ಬರುತ್ತದೆ.
ಹೈದರಾಬಾದ್ ಮೂಲದ ಕಾಲಿ ಹೆಸರಿನ ವ್ಯಕ್ತಿಯೊಬ್ಬರು ಲಿಂಗ ಬದಲಾವಣೆ ಮಾಡಿಕೊಂಡು ಮಹಿಳೆಯಾದ ಮೇಲೆ ಆಕೆಯ ಕುಟುಂಬದ್ದೂ ಇದೇ ಪರಿಸ್ಥಿತಿಯಾಗಿತ್ತು. ಕಾಲಿರ ಈ ನಿರ್ಧಾರದಿಂದ ಅವರನ್ನು ಜನರು ವಿಪರೀತ ಜಡ್ಜ್ ಮಾಡಿ ಅವರ ಕುಟುಂಬಸ್ಥರ ಮುಂದೆ ಇರುಸು ಮುರುಸಿನ ಸನ್ನಿವೇಶ ಸೃಷ್ಟಿ ಮಾಡುವುದು ನಿರೀಕ್ಷಿತವೇ ಆಗಿತ್ತು.
ಇವೆಲ್ಲವನ್ನೂ ಗಮನಿಸಿದ ಕಾಲಿ ಅಜ್ಜಿ, ಆಕೆಯ ನಿರ್ಣಯವನ್ನು ಸ್ವಾಗತಿಸಿ, ಆಕೆಗೊಂದು ಚಿನ್ನದ ಸರವನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ.
ಅಜ್ಜಿ-ಮೊಮ್ಮಗಳ ವಿಡಿಯೋವೊಂದನ್ನು ’ಹ್ಯೂಮನ್ಸ್ ಆಫ್ ಬಾಂಬೆ’ ಎಂ ಫೇಸ್ಬುಕ್ ಪೇಜ್ ಒಂದು ಶೇರ್ ಮಾಡಿದೆ.
“ನನಗೆ 87 ವರ್ಷ ವಯಸ್ಸಾಗಿದ್ದು, ಜನರು ಏನು ಹೇಳುತ್ತಾರೆ ಎಂದು ತಲೆ ಕೆಡಿಸಿಕೊಳ್ಳುವುದಿಲ್ಲ ! ನನ್ನ ಮೊಮ್ಮಗಳು ಕಾಲಿಳನ್ನು ನಿಮಗೆ ಪರಿಚಯಿಸಲು ಇಚ್ಛಿಸುತ್ತೇನೆ” ಎಂದು ಕ್ಯಾಪ್ಷನ್ ಕೊಟ್ಟು ಈ ಪೋಸ್ಟ್ ಹಂಚಿಕೊಳ್ಳಲಾಗಿದೆ.