ಮಾರುಕಟ್ಟೆ, ಮಾಲ್ ಸುತ್ತೋದು, ಪ್ರೀತಿಯ ವಸ್ತುವನ್ನು ಖರೀದಿಸೋದು ಈಗ ಎಲ್ಲರಿಗೂ ಇಷ್ಟ. ಸಾಮಾನ್ಯವಾಗಿ ಶನಿವಾರ ಹಾಗೂ ಭಾನುವಾರ ರಜಾ ಇರೋದ್ರಿಂದ ಮಾರುಕಟ್ಟೆ ತುಂಬಿ ತುಳುಕುತ್ತಿರುತ್ತೆ. ಜನರು ತಮಗೆ ಬೇಕೆನಿಸಿದ ವಸ್ತುಗಳನ್ನು ಖರೀದಿಸಿ ಮನೆಗೆ ತರ್ತಾರೆ. ಆದ್ರೆ ವಸ್ತುಗಳ ಖರೀದಿ ವೇಳೆ ಗಮನ ನೀಡುವ ಅವಶ್ಯಕತೆ ಇದೆ. ಶನಿವಾರ ಕೆಲವೊಂದು ವಸ್ತುಗಳನ್ನು ಖರೀದಿಸಿದ್ರೆ ಮನೆಯಲ್ಲಿ ಕಲಹ, ದುಃಖ, ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿವಾರ ಕೆಲವೊಂದು ವಸ್ತುಗಳನ್ನು ಖರೀದಿಸುವುದು ಒಳ್ಳೆಯದಲ್ಲ.
ಆಹಾರವನ್ನು ರುಬ್ಬುವ ಯಾವುದೇ ವಸ್ತುವನ್ನು ಶನಿವಾರ ಖರೀದಿ ಮಾಡಬಾರದು. ಮಿಕ್ಸಿ, ಗ್ರೈಂಡರ್ ಹೀಗೆ ಆಹಾರ ರುಬ್ಬಲು ಸಹಾಯವಾಗುವ ವಸ್ತುಗಳನ್ನು ಖರೀದಿಸುವುದು ಒಳ್ಳೆಯದಲ್ಲ. ಇದರಲ್ಲಿ ತಯಾರಾದ ಆಹಾರ ವಿಷಕಾರಿಯಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.
ಕಬ್ಬಿಣದಿಂದ ತಯಾರಾದ ಯಾವುದೇ ವಸ್ತುಗಳನ್ನು ಶನಿವಾರ ಖರೀದಿಸಬಾರದು. ಅನೇಕ ವರ್ಷಗಳಿಂದ ಈ ಪದ್ದತಿ ರೂಢಿಯಲ್ಲಿದೆ. ಶನಿವಾರ ಕಬ್ಬಿಣದ ಸಾಮಾನುಗಳನ್ನು ಕೊಂಡರೆ ಶನಿ ಮುನಿಸಿಕೊಳ್ಳುತ್ತಾನೆ. ಶನಿ ನಮ್ಮ ಬೆನ್ನು ಹತ್ತುತ್ತಾನೆ ಎನ್ನಲಾಗುತ್ತದೆ.
ಉಪ್ಪಿಗಿಂತ ರುಚಿ ಬೇರೆ ಇಲ್ಲ. ಅಡುಗೆ ಮನೆಯಲ್ಲಿ ಉಪ್ಪು ಇರಲೇಬೇಕು. ಆದ್ರೆ ಉಪ್ಪನ್ನು ಶನಿವಾರದ ಹೊರತು ಬೇರೆ ದಿನ ಖರೀದಿ ಮಾಡುವುದು ಒಳ್ಳೆಯದು. ಶನಿವಾರ ಉಪ್ಪು ಕೊಂಡರೆ ಸಾಲ ಜಾಸ್ತಿಯಾಗುತ್ತದೆ. ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಎಣ್ಣೆಯನ್ನು ಖರೀದಿ ಮಾಡಬಾರದು. ಜ್ಯೋತಿಷ್ಯದ ಪ್ರಕಾರ ಸಾಸಿವೆ ಸೇರಿದಂತೆ ಯಾವುದೇ ರೀತಿಯ ಎಣ್ಣೆ ಖರೀದಿ ಮಾಡಿದ್ರೂ ಅದು ರೋಗಕಾರಕವಾಗಿರುತ್ತದೆ. ಆದ್ರೆ ಶನಿವಾರ ಎಣ್ಣೆಯನ್ನು ದಾನ ಮಾಡುವುದು ಒಳ್ಳೆಯದು.
ಶನಿವಾರ ಯಾವುದೇ ಇಂಧನ ಖರೀದಿ ಮಾಡಬಾರದು. ಇಂಧನ ಖರೀದಿಸಿ ಮನೆಗೆ ತಂದ್ರೆ ಮನೆಯವರು ಕಷ್ಟ ಎದುರಿಸಬೇಕಾಗುತ್ತದೆ.
ಮನೆಯ ಕೊಳೆಯನ್ನು ತೊಡೆದು ಹಾಕುತ್ತದೆ ಪೊರಕೆ. ಇದು ಮನೆಯಲ್ಲಿ ಧನಾತ್ಮಕ ಶಕ್ತಿ ನೆಲೆಸುವಂತೆ ಮಾಡುತ್ತದೆ. ಆದ್ರೆ ಶನಿವಾರ ಪೊರಕೆ ಖರೀದಿ ಮಾಡುವುದರಿಂದ ನಕಾರಾತ್ಮಕ ಶಕ್ತಿ ಮನೆ ಪ್ರವೇಶ ಮಾಡುತ್ತದೆ.
ಕತ್ತರಿಯನ್ನು ಶನಿವಾರ ಖರೀದಿ ಮಾಡಬಾರದು. ಇದು ಸಂಬಂಧವನ್ನು ಹಾಳು ಮಾಡುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.