ಸಕಲವೂ ಕೃತಕ ಬುದ್ಧಿಮತ್ತೆ (ಎಐ) ಚಾಲಿತವಾಗುತ್ತಿರುವ ಈ ದಿನಗಳಲ್ಲಿ ನಮ್ಮ ದಿನನಿತ್ಯದ ಒಂದೊಂದು ಚಟುವಟಿಕೆಯೂ ಒಂದಲ್ಲ ಒಂದು ರೀತಿಯಲ್ಲಿ ಯಾಂತ್ರಿಕ ಬುದ್ಧಿವಂತಿಕೆಯಿಂದ ನಡೆಯಲ್ಪಡುತ್ತಿದೆ ಎಂದರೆ ಅತಿಶಯೋಕ್ತಿಯಲ್ಲ.
ರೆಸ್ಟೋರೆಂಟ್‌ಗಳಲ್ಲಿ ವೇಟರ್ ಕೆಲಸವನ್ನೂ ರೋಬೊಟ್‌ಗಳು ಮಾಡುವುದನ್ನು ನಾವು ಭಾರತದಲ್ಲೇ ಅನೇಕ ಕಡೆಗಳಲ್ಲಿ ಕೇಳಿದ್ದೇವೆ/ನೋಡಿದ್ದೇವೆ. 2020ರಲ್ಲಿ ವೈರಲ್ ಆಗಿದ್ದ ರೋಬೊಟ್ ವೇಟರ್ ಒಂದರ ವಿಡಿಯೋ ಇದೀಗ ಮತ್ತೆ ಆನ್ಲೈನ್‌ನಲ್ಲಿ ಸದ್ದು ಮಾಡುತ್ತಿದೆ.
ರೆಸ್ಟೋರೆಂಟ್‌ಗೆ ಬಂದಿದ್ದ ಗ್ರಾಹಕರ ಬಳಿ ಆರ್ಡರ್ ತೆಗೆದುಕೊಳ್ಳುವ ಕೆಲಸ ಮಾಡುವ ಈ ರೋಬೋಟ್ ತನಗೆ ಅಡ್ಡ ಬಂದ ಗ್ರಾಹಕರೊಬ್ಬರಿಗೆ, “ದಯವಿಟ್ಟು ನನ್ನ ದಾರಿಗೆ ಅಡ್ಡ ಬರಬೇಡಿ, ನಾನು ಕೆಲಸ ಮಾಡಬೇಕು. ನನ್ನ ಹೊಟ್ಟೆಪಾಡಿಗೆ ಕೆಲಸ ಮಾಡುತ್ತಿದ್ದೇನೆ. ಹೀಗಾದಲ್ಲಿ ನನ್ನನ್ನು ಫೈರ್ ಮಾಡುತ್ತಾರೆ,’’ ಎಂದು ಹೇಳುವುದನ್ನು ನೋಡಬಹುದಾಗಿದೆ.
“ರೋಬೊಟ್ ಮತ್ತೊಂದು ಕೆಲಸವನ್ನು ಕಸಿದಿದೆ. ಜನರು ಇದನ್ನು ಕ್ಯೂಟ್ ಎಂದು ಭಾವಿಸಿದ್ದಾರೆ,” ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಬರೆದರೆ, “ಫೈರ್ ಆಗುವುದು ರೋಬೊಟ್ ಅಲ್ಲ. ಅದನ್ನು ನಿಯಂತ್ರಿಸುವ ಮಾನವ ಫೈರ್ ಆಗಬಹುದು,” ಎಂದು ಮತ್ತೊಬ್ಬರು ಬರೆದಿದ್ದಾರೆ.