ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದ ಐಪಿಸಿಯ ಸೆಕ್ಷನ್ 498 ರ ದುರುಪಯೋಗ ಮತ್ತು ಹೆಂಡತಿಯು ತನ್ನ ಸಮ್ಮತಿಯನ್ನು ಹಿಂತೆಗೆದುಕೊಂಡ ವಿಚಾರವನ್ನು ನಿರ್ಧರಿಸುವ ಕಾರ್ಯವಿಧಾನದ ಕೊರತೆಯ ಕುರಿತು ಕೇಂದ್ರ ಸರ್ಕಾರ ಆತಂಕ ವ್ಯಕ್ತಪಡಿಸಿದ್ದು, ಈ ವಿಚಾರದಲ್ಲಿ ಭಾರತವು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಹಾಗೂ ಪಾಶ್ಚಾತ್ಯ ದೇಶಗಳನ್ನು ಸುಖಾಸುಮ್ಮನೇ ಅನುಸರಿಸಬಾರದು ಎಂದಿದೆ. ವೈವಾಹಿಕ ಅತ್ಯಾಚಾರಕ್ಕೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನುವಿರೋಧಿಸಿದ್ದು, ಈ ವಿಚಾರವಾಗಿ ತನ್ನ ವಿರೋಧವನ್ನು ಲಿಖಿತ ರೂಪದಲ್ಲಿ ದೆಹಲಿ ಹೈಕೋರ್ಟ್‌ಗೆ ಸಲ್ಲಿಸಿದೆ.
“ವಿವಿಧ ದೇಶಗಳು, ಹೆಚ್ಚಾಗಿ ಪಾಶ್ಚಿಮಾತ್ಯ ಜಗತ್ತು, ವೈವಾಹಿಕ ಅತ್ಯಾಚಾರವನ್ನು ಅಪರಾಧವೆಂದು ಪರಿಗಣಿಸುತ್ತವೆ ಎಂದರೆ ಭಾರತವು ಅವುಗಳನ್ನು ಕುರುಡಾಗಿ ಅನುಸರಿಸಬೇಕು ಎಂದರ್ಥವಲ್ಲ. ಸಾಕ್ಷರತೆ ಕೊರತೆಯಂಥ ಹಲವಾರು ಅಂಶಗಳಿಂದಾಗಿ ಈ ದೇಶವು ತನ್ನದೇ ಆದ ವಿಶಿಷ್ಟ ಸಮಸ್ಯೆಗಳನ್ನು ಹೊಂದಿದೆ — ದೇಶದ ಬಹುಪಾಲು ಮಹಿಳೆಯರ ಆರ್ಥಿಕ ಸಬಲೀಕರಣದ ಕೊರತೆ, ಸಮಾಜದ ಮನಸ್ಥಿತಿ, ವಿಶಾಲವಾದ ವೈವಿಧ್ಯತೆ, ಬಡತನ ಇತ್ಯಾದಿ. ವೈವಾಹಿಕ ಅತ್ಯಾಚಾರವನ್ನು ಅಪರಾಧ ಎಂದು ನಿರ್ಧಾರ ಮಾಡುವ ಮೊದಲು ಈ ಅಂಶಗಳನ್ನು ಎಚ್ಚರಿಕೆಯಿಂದ ಪರಿಗಣಿಸಬೇಕು,”ಎಂದು ಸರ್ಕಾರವು ಈ ತಿಂಗಳ ಆರಂಭದಲ್ಲಿ ಸಲ್ಲಿಸಿದ ಪ್ರತಿಕ್ರಿಯೆಯಲ್ಲಿ ತಿಳಿಸಿದೆ.
ಗಣರಾಜ್ಯೋತ್ಸವ ದಿನದಂದೇ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ ವಿವಾಹಿತ ಮಹಿಳೆ ಮೇಲೆ ದೌರ್ಜನ್ಯ: ನಾಲ್ವರು ಪಾಪಿಗಳು ಅಂದರ್
ವೈವಾಹಿಕ ಅತ್ಯಾಚಾರವನ್ನು ಸೂಕ್ತವಾಗಿ ಯಾವುದೇ ಕಾನೂನಿನಲ್ಲಿ ವ್ಯಾಖ್ಯಾನಿಸಲಾಗಿಲ್ಲ ಎಂದು ತಿಳಿಸಿದೆ ಕೇಂದ್ರ. ಯಾವುದೇ ಶಾಸನ ಅಥವಾ ಕಾನೂನಿನಲ್ಲಿ ಅತ್ಯಾಚಾರವನ್ನು ಐಪಿಸಿಯ ಸೆಕ್ಷನ್ 375ರ ಅಡಿಯಲ್ಲಿ ವ್ಯಾಖ್ಯಾನಿಸಿ, “ವೈವಾಹಿಕ ಅತ್ಯಾಚಾರವನ್ನು ವ್ಯಾಖ್ಯಾನಿಸುವುದು ಸಮಾಜದಲ್ಲಿ ವಿಶಾಲವಾದ ಒಮ್ಮತಕ್ಕೆ ಕರೆ ನೀಡುತ್ತದೆ. ವೈವಾಹಿಕ ಅತ್ಯಾಚಾರ ಯಾವುದು ಮತ್ತು ಯಾವುದು ವೈವಾಹಿಕ ಅತ್ಯಾಚಾರವಲ್ಲ ಎಂಬುದನ್ನು ಅದರ ಅಪರಾಧೀಕರಣದ ದೃಷ್ಟಿಕೋನದಿಂದ ನೋಡುವ ಮೊದಲು ನಿಖರವಾಗಿ ವ್ಯಾಖ್ಯಾನಿಸಬೇಕಾಗಿದೆ,” ಎಂದು ಕೇಂದ್ರ ತಿಳಿಸಿದೆ.