alex Certify ಮಗುವಿಗೆ ಇದ್ದಕ್ಕಿದ್ದಂತೆ ಬೇಧಿ ಪ್ರಾರಂಭವಾದರೆ ಗಾಬರಿಯಾಗಬೇಡಿ; ಈ ಕೆಲಸಗಳನ್ನು ತಕ್ಷಣ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗುವಿಗೆ ಇದ್ದಕ್ಕಿದ್ದಂತೆ ಬೇಧಿ ಪ್ರಾರಂಭವಾದರೆ ಗಾಬರಿಯಾಗಬೇಡಿ; ಈ ಕೆಲಸಗಳನ್ನು ತಕ್ಷಣ ಮಾಡಿ

ಹೆಚ್ಚಿನ ಮಕ್ಕಳು ಬಾಲ್ಯದಲ್ಲಿ ದುರ್ಬಲ ರೋಗನಿರೋಧಕ ಶಕ್ತಿಯನ್ನು ಹೊಂದಿರುತ್ತಾರೆ. ಆದ್ದರಿಂದ ಮಕ್ಕಳಲ್ಲಿ ಸೋಂಕಿನ ಅಪಾಯ ಹೆಚ್ಚು. ಸಾಮಾನ್ಯವಾಗಿ 6 ತಿಂಗಳವರೆಗೆ ಮಗುವಿಗೆ ಕೇವಲ ತಾಯಿಯ ಎದೆಹಾಲನ್ನು ಮಾತ್ರ ಕುಡಿಸುವಂತೆ ವೈದ್ಯರು ಸಲಹೆ ನೀಡುತ್ತಾರೆ. ಆರು ತಿಂಗಳ ಬಳಿಕ ನಿಧಾನವಾಗಿ ಮಗುವಿಗೆ ಘನ ಆಹಾರ ಕೊಡಲಾರಂಭಿಸುತ್ತಾರೆ. ಈ ಸಮಯದಲ್ಲಿ ಮಗುವಿಗೆ ಅತಿಸಾರದ ಸಮಸ್ಯೆ ಕಾಣಿಸಿಕೊಳ್ಳಬಹುದು. ಆ ಸಮಯದಲ್ಲಿ ಭಯಪಡಬೇಡಿ. ಕೆಲವೊಂದು ಮನೆಮದ್ದುಗಳು ಮತ್ತು ನಿರ್ದಿಷ್ಟ ಆಹಾರಗಳ ಮೂಲಕ ಅದನ್ನು ನಿಯಂತ್ರಿಸಬಹುದು.

ನಿಂಬೆ ಪಾನಕ : ಮಕ್ಕಳಲ್ಲಿ ಅತಿಸಾರದ ಸಮಸ್ಯೆ ಕಾಣಿಸಿಕೊಂಡಾಗ ದೇಹದಲ್ಲಿ ಉಪ್ಪು ಮತ್ತು ನೀರಿನ ಕೊರತೆಯಾಗುತ್ತದೆ. ಇದು ದೌರ್ಬಲ್ಯಕ್ಕೆ ಕಾರಣವಾಗುತ್ತದೆ. ಹಾಗಾಗಿ ಮಗುವಿಗೆ ನಿಂಬೆ ಪಾನಕ ಕೊಡಿ. ಒಂದು ಲೋಟ ನೀರಿಗೆ ಸ್ವಲ್ಪ ನಿಂಬೆರಸ, ಬ್ಲಾಕ್‌ ಸಾಲ್ಟ್‌ ಮತ್ತು ಸಕ್ಕರೆಯನ್ನು ಮಿಶ್ರಣ ಮಾಡಿ ಕುಡಿಸಿ.

ಎಳನೀರು : ಅತಿಸಾರ ಕಾಣಿಸಿಕೊಂಡಾಗ ಮಕ್ಕಳ ದೇಹವನ್ನು ಹೈಡ್ರೇಟ್‌ ಆಗಿಡಬೇಕು. ಇದಕ್ಕಾಗಿ ಮಗುವಿಗೆ ಎಳನೀರನ್ನು ಕುಡಿಸಿ. ಎಳನೀರಿನಲ್ಲಿ ಖನಿಜಾಂಶಗಳು ಮತ್ತು ಹಲವು ರೀತಿಯ ಪೋಷಕಾಂಶಗಳಿರುತ್ತವೆ. ಅತಿಸಾರದಿಂದ ಶೀಘ್ರ ಉಪಶಮನವೂ ದೊರೆಯುತ್ತದೆ.

ಮೊಸರು : ಮೊಸರಿನಲ್ಲಿ ಉತ್ತಮ ಬ್ಯಾಕ್ಟೀರಿಯಾಗಳು ಕಂಡುಬರುತ್ತವೆ. ಇದು ಹೊಟ್ಟೆಯ ಸಮಸ್ಯೆಗಳನ್ನು ಗುಣಪಡಿಸುವ ಪ್ರೋಬಯಾಟಿಕ್ ಅನ್ನು ಹೊಂದಿದೆ. ಮಗುವಿಗೆ ಅತಿಸಾರ ಇದ್ದರೆ ಹುರಿದ ಜೀರಿಗೆಯನ್ನು ಮೊಸರಿನಲ್ಲಿ ಬೆರೆಸಿ ತಿನ್ನಿಸಿ. ಈ ರೀತಿ ಮಾಡುವುದರಿಂದ ಶೀಘ್ರದಲ್ಲೇ ಪರಿಹಾರ ಸಿಗುತ್ತದೆ.

ಬಾಳೆಹಣ್ಣು : ಅತಿಸಾರದ ಸಂದರ್ಭದಲ್ಲಿ ಫೈಬರ್ ಭರಿತ ಆಹಾರವನ್ನು ಕೊಡಬೇಕು. ಮಗುವಿಗೆ ಬಾಳೆಹಣ್ಣು ತಿನ್ನಿಸಬಹುದು. ಇದು ಸುಲಭವಾಗಿ ಜೀರ್ಣವಾಗುತ್ತದೆ. ಚೆನ್ನಾಗಿ ಮಾಗಿದ ಹಣ್ಣನ್ನೇ ತಿನ್ನಿಸಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...