ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಹೆಂಡತಿಯ ಗುಪ್ತಾಂಗಕ್ಕೆ ಸೂಜಿ, ದಾರದಿಂದ ಹೊಲಿಗೆ ಹಾಕಿದ್ದಾನೆ. ಪತ್ನಿ ತನಗೆ ಮೋಸ ಮಾಡುತ್ತಿದ್ದಾಳೆ ಎಂಬ ಅನುಮಾನದಿಂದ ಇಂತಹ ಕೃತ್ಯವೆಸಗಿದ್ದಾನೆ.
ಮಹಿಳೆ ತಾನು ಚಿತ್ರಹಿಂಸೆ ಅನುಭವಿಸಿದರೂ ತನ್ನ ಗಂಡನ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳದಂತೆ ಪೊಲೀಸರನ್ನು ಕೇಳಿಕೊಂಡಿದ್ದಾಳೆ. ವರದಿಯ ಪ್ರಕಾರ, ಆಕೆ ತನ್ನ ಪತಿಯ ವಿರುದ್ಧ ಕೇಸು ದಾಖಲಿಸಬೇಡಿ. ಬುದ್ಧಿ ಹೇಳಿ ಸಾಕು ಎಂದು ಮನವಿ ಮಾಡಿದ್ದಾಳೆ.
ಆತನ ಪತ್ನಿ ಈ ವಿಷಯವನ್ನು ತಿಳಿಸಿದ ನಂತರ ಆರೋಪಿ ಪರಾರಿಯಾಗಿದ್ದು, ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸಿಂಗ್ರೌಲಿ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಸೋಂಕರ್ ತಿಳಿಸಿದ್ದಾರೆ.
ಈ ವರ್ಷದ ಆರಂಭದಲ್ಲಿ ನಡೆದಿದ್ದ ಮತ್ತೊಂದು ಭಯಾನಕ ಘಟನೆಯಲ್ಲಿ ಯುಪಿಯ ವ್ಯಕ್ತಿಯೊಬ್ಬ ತನ್ನ ಹೆಂಡತಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನದ ಮೇಲೆ ಗುಪ್ತಾಂಗವನ್ನು ಅಲ್ಯೂಮಿನಿಯಂ ದಾರದಿಂದ ಹೊಲಿದಿದ್ದ.
ಉತ್ತರ ಪ್ರದೇಶದ ರಾಂಪುರ್ ಜಿಲ್ಲೆಯ ಮಿಲಕ್ ಪ್ರದೇಶದಲ್ಲಿ ಈ ಘಟನೆ ನಡೆದಿತ್ತು. ಚಾಲಕನಾಗಿ ಕೆಲಸ ಮಾಡುವ ಪತಿ ತನ್ನ ಪತ್ನಿಗೆ ತನಗೆ ನಿಷ್ಠಳಾಗಿಲ್ಲ ಎಂದು ಪರೀಕ್ಷೆಗೊಳಪಡಿಸಿ ಇಂತಹ ಕೃತ್ಯವೆಸಗಿದ್ದ.
ಈ ಪರೀಕ್ಷೆಗೆ ಒಳಗಾಗಲು ಪತ್ನಿಯ ಒಪ್ಪಿಗೆಯ ಮೇರೆಗೆ, ಆ ವ್ಯಕ್ತಿ ಆಕೆಯ ಕೈಕಾಲುಗಳನ್ನು ಕಟ್ಟಿ ಆಕೆಯ ಗುಪ್ತಾಂಗವನ್ನು ಹೊಲಿದು ಅಪರಾಧ ಕೃತ್ಯವೆಸಗಿ ನಂತರ ಪರಾರಿಯಾಗಿದ್ದ.
ರಕ್ತಸ್ರಾವವಾಗುತ್ತಿದ್ದರೂ ಲೆಕ್ಕಿಸದೇ ರಾಕ್ಷಸೀಯ ವರ್ತನೆ ತೋರಿ ಪತಿ ಪರಾರಿಯಾಗಿದ್ದು, ನಂತರ 24 ವರ್ಷದ ಮಹಿಳೆ ತನ್ನ ತಾಯಿಯನ್ನು ಸಂಪರ್ಕಿಸಿದಳು, ನಂತರ ಸಂತ್ರಸ್ತೆಯನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಮಗಳನ್ನು ಕರೆದೊಯ್ದ ಸಂತ್ರಸ್ತೆ ತಾಯಿ, ಮಿಲಕ್ ಪೊಲೀಸ್ ಠಾಣೆಗೆ ತನ್ನ ಅಳಿಯನ ವಿರುದ್ಧ ದೂರು ಕೂಡ ನೀಡಿದ್ದಳು.
ರಾಂಪುರ ಪೊಲೀಸ್ ವರಿಷ್ಠಾಧಿಕಾರಿ(ಎಸ್ಪಿ) ಕೂಡ ಮಹಿಳೆಗೆ ಗಂಭೀರ ಗಾಯಗಳಾಗಿರುವುದನ್ನು ದೃಢಪಡಿಸಿ ಆಕೆಗೆ ಸೂಕ್ತ ಚಿಕಿತ್ಸೆ ಕೊಡಿಸುವುದಾಗಿ ಭರವಸೆ ನೀಡಿದ್ದರು. ಒಂದೆರಡು ದಿನದ ನಂತರ ಆರೋಪಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.