ವಾಷಿಂಗ್ಟನ್: ಫಿಜರ್ ಮತ್ತು ಬಯಾನ್ ಟೆಕ್ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಕೊರೋನಾ ಲಸಿಕೆ ಪ್ರಯೋಗದಲ್ಲಿ ಶೇಕಡ 90 ರಷ್ಟು ಯಶಸ್ವಿಯಾಗಿದೆ.
ಪ್ರಯೋಗದ ಸಂದರ್ಭದಲ್ಲಿ ಕೊರೋನಾ ತಡೆಯುವಲ್ಲಿ ಲಸಿಕೆ ಯಶಸ್ವಿಯಾಗಿದೆ ಎಂದು ಅಮೆರಿಕದ ಖಾಸಗಿ ಕಂಪನಿ ಫಿಜರ್ ಮತ್ತು ಬಯಾನ್ ಟೆಕ್ ಕಂಪನಿಗಳು ತಿಳಿಸಿವೆ. 43,500 ಕೊರೋನಾ ಸೋಂಕಿತರ ಮೇಲೆ ಲಸಿಕೆ ಪ್ರಯೋಗಿಸಲಾಗಿದೆ. ಪ್ರಯೋಗದ ವೇಳೆ ಶೇಕಡ 90 ರಷ್ಟು ಸೋಂಕು ನಿಯಂತ್ರಣಕ್ಕೆ ಬಂದಿದೆ. ಲಸಿಕೆ ಶೇಕಡ 90 ರಷ್ಟು ಕೊರೋನಾ ನಿವಾರಿಸುವುದಾಗಿ ಸಂಸ್ಥೆ ಹೇಳಿಕೊಂಡಿದೆ. ಮೂರು ವಾರಗಳ ಅಂತರದಲ್ಲಿ ಎರಡು ಬಾರಿ ಔಷಧೀಯ ಪ್ರಯೋಗ ಮಾಡಲಾಗಿದೆ. ವರ್ಷಾಂತ್ಯಕ್ಕೆ 5 ಕೋಟಿ ಡೋಸ್ ಲಸಿಕೆ ಸಪ್ಲೈ ಮಾಡುವ ಗುರಿ ಹೊಂದಲಾಗಿದೆ ಎಂದು ಹೇಳಲಾಗಿದೆ.
ಯಶಸ್ವಿ ಲಸಿಕೆ ಬಗ್ಗೆ ಅಮೆರಿಕ ಫಾರ್ಮಾ ಕಂಪನಿಯಿಂದ ಮಾಹಿತಿ ನೀಡಲಾಗಿದ್ದು, ಗ್ರೇಟ್ ನ್ಯೂಸ್ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದಾರೆ.