ಡೊನಾಲ್ಡ್ ಟ್ರಂಪ್ ನಿಧನರಾಗಿರುವುದಾಗಿ ಅವರ ಪುತ್ರ ಖಾತೆ ಹ್ಯಾಕ್ ಮಾಡಿದ ಹ್ಯಾಕರ್ ಗಳು ಪೋಸ್ಟ್ ಹಾಕಿದ್ದಾರೆ.
ಡೊನಾಲ್ಡ್ ಟ್ರಂಪ್ ಜೂನಿಯರ್ ಅವರ ಸಾಮಾಜಿಕ ಮಾಧ್ಯಮ ಖಾತೆ X ನಲ್ಲಿ(ಟ್ವಿಟರ್) ಸಾವಿನ ಸುಳ್ಳು ಪ್ರಕಟಣೆ ಪೋಸ್ಟ್ ಮಾಡಲಾಗಿದೆ.
ನನ್ನ ತಂದೆ ಡೊನಾಲ್ಡ್ ಟ್ರಂಪ್ ನಿಧನರಾಗಿದ್ದಾರೆ, ನಾನು 2024 ರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿದ್ದೇನೆ ಎಂದು ಘೋಷಿಸಲು ನನಗೆ ದುಃಖವಾಗಿದೆ ಎಂದು ಜೂನಿಯರ್ ಖಾತೆಯಿಂದ ಪೋಸ್ಟ್ ಮಾಡಲಾಗಿದೆ. ಇದು ಭಾರೀ ಅಲ್ಲೋಲ ಕಲ್ಲೋಲಕ್ಕೆ ಕಾರಣವಾಗಿದೆ.
ಡೊನಾಲ್ಡ್ ಟ್ರಂಪ್ ಅವರ ಸಾವಿನ ಸುಳ್ಳು ಸುದ್ದಿಯು ಬಳಕೆದಾರರಲ್ಲಿ ತಕ್ಷಣದ ಅಪನಂಬಿಕೆ ಮತ್ತು ಗೊಂದಲ ಉಂಟು ಮಾಡಿದೆ. ಡಾನ್ ಜೂನಿಯರ್ ಖಾತೆಗೆ ಧಕ್ಕೆಯಾಗಿದೆ ಎಂದು ಹಲವರು ಊಹಿಸಿದ್ದಾರೆ. ಟ್ವಿಟರ್ ಬಳಕೆದಾರರು ಪರಿಸ್ಥಿತಿಯನ್ನು ಚರ್ಚಿಸಲು “ಹ್ಯಾಕ್ಡ್” ಪದವನ್ನು ಟ್ರೆಂಡ್ ಮಾಡಲು ಪ್ರಾರಂಭಿಸಿದ್ದಾರೆ.
ಆದಾಗ್ಯೂ, ಅವರು ಜೀವಂತವಾಗಿದ್ದಾರೆ ಮತ್ತು ಆರೋಗ್ಯವಾಗಿದ್ದಾರೆ ಎಂದು ಖಚಿತಪಡಿಸಲು ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸ್ವಂತ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ನಲ್ಲಿ ತಿಳಿಸಿದ್ದಾರೆ.