ವಾಷಿಂಗ್ಟನ್: ಎರಡನೇ ಬಾರಿ ಮಹಾಭಿಯೋಗದಿಂದ ಅಮೆರಿಕ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾರಾಗಿದ್ದಾರೆ.
ಮೂರನೇ ಎರಡರಷ್ಟು ಬಹುಮತವಿಲ್ಲದ ಕಾರಣ ಅವರನ್ನು ಖುಲಾಸೆಗೊಳಿಸಲಾಗಿದೆ. ಜನವರಿ 6 ರಂದು ಅಮೆರಿಕದ ಕ್ಯಾಪಿಟಲ್ಸ್ ಮೇಲೆ ದಾಳಿ ನಡೆದ ಪ್ರಕರಣಕ್ಕೆ ಸಂಬಂದಿಸಿದಿಂತೆ ದಾಳಿಗೆ ಟ್ರಂಪ್ ಪ್ರಚೋದನೆ ನೀಡಿದ ಆರೋಪ ಕೇಳಿಬಂದಿದ್ದು ಅವರನ್ನು ವಾಗ್ದಂಡನೆಗೆ ಒಳಪಡಿಸಲಾಗಿತ್ತು. ನಿರ್ಣಯದ ಪರವಾಗಿ 43 ಮತ ಮತ್ತು ವಿರುದ್ಧವಾಗಿ 57 ಮತ ಚಲಾವಣೆಯಾಗಿವೆ. ಹೀಗಾಗಿ ಟ್ರಂಪ್ ವಾಗ್ದಂಡನೆಯಿಂದ ಪಾರಾಗಿದ್ದಾರೆ.